ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೊಂದಿಗೆ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ತಾರಕಕ್ಕೇರಿರುವ ಬೆನ್ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಏಕದಿನ ಸರಣಿ ಅನಿಶ್ಚಿತತೆಯಲ್ಲಿದೆ.
ಅಕ್ಟೋಬರ್ ನಲ್ಲಿ ನಡೆಯಲಿರುವ ಸರಣಿಯನ್ನೇ ದಾಳವಾಗಿಟ್ಟಕೊಂಡು ಆಸ್ಟ್ರೇಲಿಯಾ ಕ್ರಿಕೆಟಿಗರು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ. ಸದ್ಯಕ್ಕೆ ಆಸ್ಟ್ರೇಲಿಯಾದ ದ. ಆಫ್ರಿಕಾ ಪ್ರವಾಸದ ಬಗ್ಗೆ ಸಣ್ಣ ಭರವಸೆಯೊಂದು ಉಳಿದುಕೊಂಡಿದೆ.
ಅದಾದ ಮೇಲೆ ಆಗಸ್ಟ್ ನಲ್ಲಿ ನಡೆಯಬೇಕಿರುವ ಬಾಂಗ್ಲಾದೇಶ ಸರಣಿಗೂ ಮುನ್ನ ಯಾವುದಾದರೊಂದು ತೀರ್ಮಾನಕ್ಕೆ ಬರಲೇಬೇಕೆಂದು ಆಟಗಾರರು ಪಟ್ಟು ಹಿಡಿಯುವ ಸಾಧ್ಯೆತೆಯಿದೆ. ಆದರೆ ಭಾರತದೊಂದಿಗಿನ ಏಕದಿನ ಸರಣಿ ರದ್ದುಗೊಳಿಸಿದರೆ ಬಿಸಿಸಿಐ ಸುಮ್ಮನಿರದು.
ಆ ಭಯ ಕ್ರಿಕೆಟ್ ಆಸ್ಟ್ರೇಲಿಯಾಕ್ಕಿದೆ. ಯಾವ ಸರಣಿಯನ್ನು ತಪ್ಪಿಸಿಕೊಂಡರೂ ಸರಿಯೇ. ಆದರೆ ಭಾರತ ಸರಣಿಯನ್ನು ತಪ್ಪಿಸಿಕೊಂಡರೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರೀ ಬೆಲೆ ತೆರಬೇಕಾದೀತು ಎಂಬ ಚಿಂತೆಯ್ಲಿ ಕ್ರಿಕೆಟ್ ಆಸ್ಟ್ರೇಲಿಯಾವಿದೆ. ಇದಕ್ಕಿಂತ ಮೊದಲು ಇಂಗ್ಲೆಂಡ್ ನೊಂದಿಗೆ ಆಷಸ್ ಸರಣಿಯಿದ್ದು ಅದೂ ರದ್ದಾದರೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಭಾರೀ ನಷ್ಟವಾಗಬಹುದು. ಹೀಗಾಗಿ ಉಭಯ ಸಂಕಟದಲ್ಲಿ ಆಸ್ಟ್ರೇಲಿಯಾವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ