ಭಾರತ-ಆಸ್ಟ್ರೇಲಿಯಾಗೆ ಡೆಲ್ಲಿ ಟೆಸ್ಟ್: ದ್ವಿತೀಯ ಟೆಸ್ಟ್ ಇಂದಿನಿಂದ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಗೆಲುವು ಮುಖ್ಯವಾಗಿದೆ. ಅದದರ ಮೊದಲನೇ ಹಂತವಾಗಿ ಮೊದಲ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಗೆದ್ದುಕೊಂಡಿದೆ.
ಭಾರತ ತಂಡಕ್ಕೆ ಈ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಪುನರಾಗಮನವಾಗಲಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇನ್ನು ಕೆಎಲ್ ರಾಹುಲ್ ಫಾರ್ಮ್ ಕಂಡುಕೊಳ್ಳಲು ಮತ್ತೊಂದು ಅವಕಾಶ ಸಿಗುವ ಸಾಧ‍್ಯತೆಯಿದೆ. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಇರದು. ಈ ಪಂದ್ಯ ಬೆಳಿಗ್ಗೆ 9.30 ಕ್ಕೆ ಆರಂಭವಾಗುತ್ತಿದೆ.