ಭಾರತ-ಆಸ್ಟ್ರೇಲಿಯಾ ಮಹಿಳಾ ಟೆಸ್ಟ್: ಭಾರತೀಯರ ಅದ್ಭುತ ಬ್ಯಾಟಿಂಗ್

ಶುಕ್ರವಾರ, 1 ಅಕ್ಟೋಬರ್ 2021 (16:52 IST)
ಕ್ವೀನ್ಸ್ ಲ್ಯಾಂಡ್: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ನಡುವೆ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತೀಯರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.


ದ್ವಿತೀಯ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ ಭಾರತೀಯರು 5 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದ್ದಾರೆ. ನಿನ್ನೆ ಅಜೇಯರಾಗುಳಿದಿದ್ದ ಸ್ಮೃತಿ ಮಂಥನಾ ಇಂದು ಭರ್ಜರಿ ಶತಕ ಗಳಿಸಿ 127 ರನ್ ಗಳಿಗೆ ಔಟಾದರು.

ಉಳಿದಂತೆ ಪೂನಂ ರಾವತ್ 36, ಮಿಥಾಲಿ ರಾಜ್ 30, ಯಶಿಕಾ ಭಾಟಿಯಾ 19 ರನ್ ಗಳಿಸಿ ಔಟಾಗಿದ್ದಾರೆ.  ಇದೀಗ 12 ಗಳಿಸಿರುವ ದೀಪ್ತಿ ಶರ್ಮಾ ಮತ್ತು ಖಾತೆ ತೆರೆಯದೇ ತಾನಿಯಾ ಭಾಟಿಯಾ ಕ್ರೀಸ್ ನಲ್ಲಿದ್ದಾರೆ. ನಿನ್ನೆಯ ದಿನದಾಟ ಮಳೆಯಿಂದಾಗಿ ಬೇಗನೇ ಮುಕ್ತಾಯಗೊಂಡಿತ್ತು. ಇಂದೂ ಕೂಡಾ ಮಳೆ ಅಡ್ಡಿಪಡಿಸಿದ್ದರಿಂದ ನಿಗದಿತ ಸಮಯಕ್ಕಿಂತ ಮೊದಲೇ ಆಟ ನಿಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ