ಐಪಿಎಲ್ 14: ಕೆಕೆಆರ್ ಗೆ ಇಂದು ಪಂಜಾಬ್ ವಿರುದ್ಧ ಮಹತ್ವದ ಪಂದ್ಯ

ಶುಕ್ರವಾರ, 1 ಅಕ್ಟೋಬರ್ 2021 (09:05 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ಕಿಂಗ್ಸ್ ಪಂಜಾಬ್ ವಿರುದ್ಧ ಮಹತ್ವದ ಪಂದ್ಯ ನಡೆಯಲಿದೆ.


11 ಪಂದ್ಯಗಳಿಂದ 5 ಗೆಲುವು ಕಂಡಿರುವ ಕೆಕೆಆರ್ ಈಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದೀಗ ಪ್ಲೇ ಆಫ್ ಹಂತಕ್ಕೇರುವ ನಿಟ್ಟಿನಲ್ಲಿ ಕೆಕೆಆರ್ ಗೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಅತ್ತ ಪಂಜಾಬ್ ಗೆ ಪ್ಲೇ ಆಫ್ ಕನಸು ಕ್ಷೀಣಿಸಿದೆ. ಆದರೆ ಪ್ರತಿಷ್ಠೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಗೆಲ್ಲುವುದು ಮುಖ್ಯವಾಗಿದೆ. ಎರಡನೇ ಹಂತದಲ್ಲಿ ಕೇವಲ ಒಂದು ಗೆಲುವು ಕಂಡಿರುವ ಪಂಜಾಬ್ ಮತ್ತೊಂದು ಗೆಲುವಿನ ಹುಡುಕಾಟದಲ್ಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ