ಭಾರತ-ಆಸ್ಟ್ರೇಲಿಯಾ ಏಕದಿನ: ಕೊನೆಯ ಬಾಲ್ ನಲ್ಲಿ ಸೋತ ಮಹಿಳೆಯರು

ಶುಕ್ರವಾರ, 24 ಸೆಪ್ಟಂಬರ್ 2021 (20:53 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ನಡುವಿನ ದ್ವಿತೀಯ ಏಕದಿನ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ದುರದೃಷ್ಟವಶಾತ್ ಕೊನೆಯ ಬಾಲ್ ನಲ್ಲಿ ಭಾರತ ಸೋತಿದೆ.


ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 275 ರನ್ ಗಳಿಸುವ ಮೂಲಕ ಅಂತಿಮ ಎಸೆತದಲ್ಲಿ 5 ವಿಕೆಟ್ ಗಳ ಗೆಲುವು ದಾಖಲಿಸಿತು.

ರೋಚಕವಾಗಿದ್ದ ಕೊನೆಯ ಓವರ್ ನ್ನು ಜೂಲಾನ್ ಗೋಸ್ವಾಮಿ ಬೌಲಿಂಗ್ ಮಾಡಿದ್ದರು. ಅಂತಿಮ ಎಸೆತದಲ್ಲಿ ಭಾರತ ಇನ್ನೇನು ಗೆಲುವು ಕಂಡಿತ್ತು ಎಂದು ಸಂಭ್ರಮಿಸುವಾಗ ಅಂಪಾಯರ್ ಆ ಬಾಲ್ ನ್ನು ನೋ ಬಾಲ್ ಎಂದು ಘೋಷಿಸಿದರು. ಇದರಿಂದಾಗಿ ಎದುರಾಳಿಗಳಿಗೆ ಮತ್ತೊಂದು ಎಸೆತ ಸಿಕ್ಕಿತು. ಈ ಎಸೆತದಲ್ಲಿ ಆಸ್ಟ್ರೇಲಿಯಾ ನಿಕೊಲಾ ಕ್ಯಾರೀ ಎರಡು ರನ್ ಕಬಳಿಸುವ ಮೂಲಕ ರೋಚಕ ಗೆಲುವು ದಕ್ಕಿಸಿಕೊಟ್ಟರು. ಭಾರತದ ವನಿತೆಯರು ಒತ್ತಡ ನಿಭಾಯಿಸುವಲ್ಲಿ ಎಡವಿ ಕೂದಲೆಳಯಲ್ಲಿ ಗೆಲುವು ಕಳೆದುಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ