ಭಾರತ-ಬಾಂಗ್ಲಾ ಮೊದಲ ಟಿ20 ಇಂದು

ಭಾನುವಾರ, 3 ನವೆಂಬರ್ 2019 (08:51 IST)
ನವದೆಹಲಿ: ವಾಯು ಮಾಲಿನ್ಯದ ಸಮಸ್ಯೆ ನಡುವೆಯೇ ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ಮೊದಲ ಟಿ20 ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.


ಹೊಗೆಯುಕ್ತ ವಾತಾವರಣದಿಂದಾಗಿ ಅಭ್ಯಾಸದ ವೇಳೆ ಆಟಗಾರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಪಂದ್ಯದ ವೇಳೆಯೂ ಮಾಸ್ಕ್ ಧರಿಸಿ ಆಡಿದರೂ ಅಚ್ಚರಿಯಿಲ್ಲ.

ಇದರ ಹೊರತಾಗಿ ಈ ಸರಣಿಯಲ್ಲಿ ಟೀಂ ಇಂಡಿಯಾ ಯುವ ತಂಡ ಬಾಂಗ್ಲಾವನ್ನು ಎದುರಿಸಲಿದೆ. ಕೊಹ್ಲಿ ಇಲ್ಲದೇ ರೋಹಿತ್ ತಂಡವನ್ನು ಮುನ್ನಡೆಸಲಿದ್ದು, ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ. ಅತ್ತ ಬಾಂಗ್ಲಾ ಕೂಡಾ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಜರ್ಜರಿತವಾಗಿದ್ದು, ಉತ್ತಮ ಆಟವಾಡಿ ಮನೋಬಲ ಹೆಚ್ಚಿಸಬೇಕಿದೆ. ಪಂದ್ಯ ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ