ಭಾರತ-ಬಾಂಗ್ಲಾದೇಶ ದ್ವಿತೀಯ ಟಿ20 ಇಂದು ನಡೆಯುವುದೇ ಅನುಮಾನ?!

ಗುರುವಾರ, 7 ನವೆಂಬರ್ 2019 (09:23 IST)
ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ರಾಜ್ ಕೋಟ್ ಮೈದಾನದಲ್ಲಿ ನಡೆಯಲಿದೆ. ಆದರೆ ಇಂದು ಪಂದ್ಯ ನಡೆಯುವುದೇ ಅನುಮಾನವಾಗಿದೆ.


ಹವಾಮಾನ ಇಲಾಖೆ ವರದಿ ಪ್ರಕಾರ ಇಂದು ಇಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪಂದ್ಯ ನಡೆಯುವುದೇ ಅನುಮಾನವಾಗಿದೆ.

ಕಳೆದ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ದೆಹಲಿಯ ಹೊಗೆಯುಕ್ತ ವಾತಾವರಣದಿಂದ ಆಟಗಾರರು ಕಿರಿ ಕಿರಿ ಅನುಭವಿಸಿದ್ದರು. ಇದರ ನಡುವೆ ಟೀಂ ಇಂಡಿಯಾ ಆಘಾತಕಾರಿಯಾಗಿ ಸೋತಿತ್ತು. ಈ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ನಿಗದಿಯಂತೆ ನಡೆದರೆ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಬೇಕಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ