ಭಾರತ-ಬಾಂಗ್ಲಾ ಟೆಸ್ಟ್: ಟೀಂ ಇಂಡಿಯಾಕ್ಕೆ ಬೇಕು 100, ಬಾಂಗ್ಲಾಗೆ 6 ಸಾಕು

ಶನಿವಾರ, 24 ಡಿಸೆಂಬರ್ 2022 (17:10 IST)
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಮೂರನೇ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ.

87 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾ 231 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 145 ರನ್ ಗಳ ಗೆಲುವಿನ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ಅಗ್ರ ಕ್ರಮಾಂಕ ಕೈ ಕೊಟ್ಟಿದೆ.

ನಾಯಕ ಕೆಎಲ್ ರಾಹುಲ್ ಮತ್ತೊಮ್ಮೆ ವೈಫಲ್ಯಕ್ಕೊಳಗಾಗಿದ್ದು 2 ರನ್ ಗೆ ವಿಕೆಟ್ ಒಪ್ಪಿಸಿದರು. ಶುಬ್ನಂ ಗಿಲ್ ರದ್ದು 7 ರನ್ ಗಳ ಕೊಡುಗೆ. ಚೇತೇಶ್ವರ ಪೂಜಾರ 6 ರನ್ ಗೆ ವಿಕೆಟ್ ಒಪ್ಪಿಸಿದರೆ ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದ್ದು 1  ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.

ಇದೀಗ ಅಕ್ಸರ್ ಪಟೇಲ್ 26 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದು, 3 ರನ್ ಗಳಿಸಿರುವ ಜಯದೇವ್ ಉನಾದ್ಕಟ್‍ ಅವರಿಗೆ ಸಾಥ್ ನೀಡುತ್ತಿದ್ದಾರೆ. ಭಾರತ ಗೆಲುವಿಗೆ ಇನ್ನೂ ಭರ್ತಿ 100 ರನ್ ಗಳಿಸಬೇಕಿದೆ. ಅತ್ತ ಬಾಂಗ್ಲಾ 6 ವಿಕೆಟ್ ಕಬಳಿಸಿ ಗೆಲುವು ಪಡೆಯುವ ಉತ್ಸಾಹದಲ್ಲಿದೆ. ನಾಳೆ ನಾಲ್ಕನೆಯ ದಿನ ನಿರ್ಣಾಯಕವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ