ಭಾರತ-ಬಾಂಗ್ಲಾ ಟೆಸ್ಟ್: 314 ಕ್ಕೆ ಟೀಂ ಇಂಡಿಯಾ ಆಲೌಟ್

ಶುಕ್ರವಾರ, 23 ಡಿಸೆಂಬರ್ 2022 (16:05 IST)
Photo Courtesy: Twitter
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 314 ರನ್ ಗಳಿಗೆ ಆಲೌಟ್ ಆಗಿದೆ.

ಬಾಂಗ್ಲಾದೇಶ ಮೊದಲ ಇನಿಂಗ್ಸ್ ನಲ್ಲಿ 227 ರನ್ ಗೆ ಆಲೌಟ್ ಆಗಿತ್ತು. ಇದರೊಂದಿಗೆ ಟೀಂ ಇಂಡಿಯಾಗೆ 87 ರನ್ ಗಳ ಮಹತ್ವದ ಮುನ್ನಡೆ ಲಭಿಸಿದೆ.

ದ್ವಿತೀಯ ದಿನವಾದ ಇಂದು 19 ರನ್ ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಆಸರೆಯಾಗಿದ್ದು ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್. ಮೂರು ವಿಕೆಟ್ ಗಳನ್ನು ಬೇಗನೇ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಷಬ್-ಶ್ರೇಯಸ್ ಜೋಡಿ 150 ಪ್ಲಸ್ ರನ್ ಗಳ ಜೊತೆಯಾಟವಾಡಿ ಚೇತರಿಕೆ ನೀಡಿದರು. ರಿಷಬ್ ತಮ್ಮ ಹೊಡೆಬಡಿಯ ಶೈಲಿಯಲ್ಲಿ ಬ್ಯಾಟ್ ಬೀಸಿ 93 ರನ್ ಗಳಿಸಿದ್ದಾಗ ಮತ್ತೆ ನರ್ವಸ್ ನೈಂಟಿಯಾಗಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಇದು 6 ನೇ ಬಾರಿ ಅವರು 90 ರ ಆಸುಪಾಸಿನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಅತ್ತ ಶ್ರೇಯಸ್ ಅಯ್ಯರ್ ಕೂಡಾ 87 ರನ್ ಗೆ ವಿಕೆಟ್ ಒಪ್ಪಿಸಿ ಶತಕ ಪೂರೈಸಲಾಗದೇ ನಿರಾಶೆ ಅನುಭವಿಸಿದರು.

ಉಳಿದವರಿಂದ ಹೇಳಿಕೊಳ್ಳುವಂತಹ ರನ್ ಬರಲಿಲ್ಲ. ಇದರಿಂದಾಗಿ ಟೀಂ ಇಂಡಿಯಾ 314 ರನ್ ಗೆ ಆಲೌಟ್ ಆಯಿತು. ಬಾಂಗ್ಲಾ ಪರ ನಾಯಕ ಶಕೀಬ್ ಅಲ್ ಹಸನ್ ಮತ್ತು ತೈಜುಲ್ ಇಸ್ಲಾಮ್ ತಲಾ 4 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ