ಭಾರತ-ಬಾಂಗ್ಲಾ ಟೆಸ್ಟ್: ಟೀಂ ಇಂಡಿಯಾದ ಮೂರು ವಿಕೆಟ್ ಪತನ
ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾ 227 ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ನಿನ್ನೆಯ ದಿನದಂತ್ಯಕ್ಕೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿತ್ತು. ಇಂದು ಬೆಳಗ್ಗಿನ ಅವಧಿಯಲ್ಲಿ ನಾಯಕ ಕೆಎಲ್ ರಾಹುಲ್ 10, ಶುಬ್ನಂ ಗಿಲ್ 20 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಕೊಹ್ಲಿ-ಚೇತೇಶ್ವರ ಪೂಜಾರ ಎಚ್ಚರಿಕೆಯ ಆಟವಾಡಿದರು. ಇನ್ನೇನು ಪೂಜಾರ ಆಟಕ್ಕೆ ಕುದುರಿಕೊಳ್ಳುತ್ತಾರೆ ಎಂದಾಗ 24 ರನ್ ಗೆ ವಿಕೆಟ್ ಒಪ್ಪಿಸಿದರು.
ಇದೀಗ ವಿರಾಟ್ ಕೊಹ್ಲಿ 18 ರನ್ ಗಳಿಸಿ, ರಿಷಬ್ ಪಂತ್ 12 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಈಗ 141 ರನ್ ಗಳ ಹಿನ್ನಡೆಯಲ್ಲಿದೆ. ಟೀಂ ಇಂಡಿಯಾದ ಮೂರೂ ವಿಕೆಟ್ ಗಳೂ ತೈಜುಲ್ ಇಸ್ಲಾಂ ಪಾಲಾಗಿದೆ.