ರಾಹುಲ್ ದ್ರಾವಿಡ್ ಕೋಚ್ ಆಗಿ ಟೀಂ ಇಂಡಿಯಾ ಸೋಲಿನ ಲಿಸ್ಟ್

ಭಾನುವಾರ, 11 ಡಿಸೆಂಬರ್ 2022 (09:00 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗಿದೆ. ದ್ರಾವಿಡ್ ಕೋಚ್  ಆದ ಮೇಲೆ ಟೀಂ ಇಂಡಿಯಾ ಸರಣಿ ಸೋಲು ಅನುಭವಿಸಿದ್ದೇ ಹೆಚ್ಚು. ಅವರ ಅಧಿಕಾರಾವಧಿಯಲ್ಲಿ ಟೀಂ ಇಂಡಿಯಾ ಸೋಲಿನ ಲಿಸ್ಟ್ ಹೀಗಿದೆ.
 

ದ.ಆಫ್ರಿಕಾದಲ್ಲಿ ಟೆಸ್ಟ್, ಏಕದಿನ ಸೋಲು: ಕೋಚ್ ಆಗಿ ಮೊದಲ ಬಾರಿಗೆ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ದ.ಆಫ್ರಿಕಾ ನಾಡಿಗೆ ವಿದೇಶ ಪ್ರವಾಸ ಮಾಡಿತ್ತು. ಆ ಟೆಸ್ಟ್ ಸರಣಿ ಗೆದ್ದಿದ್ದರೆ ಟೀಂ ಇಂಡಿಯಾ ಇತಿಹಾಸ ನಿರ್ಮಿಸುತ್ತಿತ್ತು. ಆದರೆ ಆ ಪ್ರವಾಸದಲ್ಲಿ ಟೆಸ್ಟ್ ಮತ್ತು ಏಕದಿನ ಎರಡೂ ಸರಣಿ ಸೋಲು ಅನುಭವಿಸಿತು.

ಇಂಗ್ಲೆಂಡ್ ಟೆಸ್ಟ್ ಸೋಲು: ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿದ್ದ ಐದನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಸೋತಿತು. ಒಂದು ವೇಳೆ ಈ ಪಂದ್ಯ ಗೆದ್ದಿದ್ದರೆ ಟೀಂ ಇಂಡಿಯಾ ಸರಣಿ ಗೆಲುವು ಕಾಣುತ್ತಿತ್ತು. ಈ ಸೋಲಿನಿಂದಾಗಿ ಸರಣಿ ಸಮಬಲವಾಗುವಂತಾಯಿತು.
ಏಷ್ಯಾ ಕಪ್ ಸೋಲು: ಪಾಕಿಸ್ತಾನ ಮತ್ತು ಶ್ರೀಲಂಕಾ ಬಿಟ್ಟರೆ ಭಾರತವೇ ಈ ಟೂರ್ನಿಯ ಪ್ರಬಲ ತಂಡವಾಗಿತ್ತು. ಆದರೆ ಯುಎಇನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋತು ಸುಣ್ಣವಾಯಿತು.
ಟಿ20 ವಿಶ್ವಕಪ್: ಕಳೆದ 6 ವರ್ಷಗಳಿಂದ ಕನಸಾಗಿದ್ದ ಐಸಿಸಿ ಟ್ರೋಫಿ ಈ ವರ್ಷವಾದರೂ ಭಾರತದ ಕೈ ವಶವಾಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಭಾರತ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಕನಸು ಭಗ್ನವಾಯಿತು.
ಬಾಂಗ್ಲಾದೇಶ ಏಕದಿನ ಸರಣಿ ಸೋಲು: ಬಾಂಗ್ಲಾದೇಶದಂತಹ ದುರ್ಬಲ ತಂಡದ ಎದುರು ಏಕದಿನ ಸರಣಿ ಹೀನಾಯವಾಗಿ ಸೋತಿರುವುದು ಅಭಿಮಾನಿಗಳ ಆಕ್ರೋಶ ಹೆಚ್ಚಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ