ಮಹಿಳಾ ವಿಶ್ವಕಪ್: ಇಂಗ್ಲೆಂಡ್ ವಿರುದ್ದ ಮುಗ್ಗರಿಸಿದ ಭಾರತೀಯರು
ಇಂಗ್ಲೆಂಡ್ ಬೌಲಿಂಗ್ ಮುಂದೆ ಸಂಪೂರ್ಣ ಮುಗ್ಗರಿಸಿದ ಭಾರತ ತಂಡ 36.2 ಓವರ್ ಗಳಲ್ಲಿ 134 ರ ಜುಜುಬಿ ಮೊತ್ತಕ್ಕೆ ಆಲೌಟ್ ಆಗಿದೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಥನಾ 35, ರಿಚಾ ಘೋಷ್ 33, ಜೂಲಾನ್ ಗೋಸ್ವಾಮಿ 20 ಮತ್ತು ಹರ್ಮನ್ ಪ್ರೀತ್ ಕೌರ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಎರಡಂಕಿಯನ್ನೂ ದಾಟಲಿಲ್ಲ.
ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಮೊತ್ತ ಗಳಿಸಿದ್ದ ಭಾರತ ಈ ಪಂದ್ಯದಲ್ಲಿ ಸಂಪೂರ್ಣವಾಗಿ ಮುಗ್ಗರಿಸಿದೆ. ಇಂಗ್ಲೆಂಡ್ ಪರ ಚಾರ್ಲೆಟ್ ಡೀನ್ 4, ಆನ್ಯಾ ಶ್ರೂಬ್ಸ್ ಲೇ 2 ಕ್ಯಾಟ್ ಕ್ರಾಸ್ ಮತ್ತು ಸೋಫೀ ತಲಾ 1 ವಿಕೆಟ್ ಕಬಳಿಸಿದರು.