ಟೀಂ ಇಂಡಿಯಾಗೆ ಮತ್ತೊಬ್ಬ ನಾಯಕ: ಬುಮ್ರಾ ನಾಯಕತ್ವದಲ್ಲಿ ಇಂಗ್ಲೆಂಡ್ ಟೆಸ್ಟ್ ಗೆ ಸಿದ್ಧವಾದ ಟೀಂ ಇಂಡಿಯಾ

ಶುಕ್ರವಾರ, 1 ಜುಲೈ 2022 (08:20 IST)
ಲಂಡನ್: ಕಳೆದ ಎಂಟು ತಿಂಗಳ ಅವಧಿಯಲ್ಲಿ ಟೀಂ ಇಂಡಿಯಾಗೆ ಏಳನೇ ನಾಯಕನನ್ನು ನೇಮಿಸಲಾಗಿದೆ. ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಇಂದಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವಾಡಲಿದೆ.

ಜಸ್ಪ್ರೀತ್ ಬುಮ್ರಾ ವೇಗದ ಬೌಲರ್ ಆಗಿರುವ ಕಾರಣಕ್ಕೆ 35 ವರ್ಷಗಳ ಬಳಿಕ ವೇಗಿಯೊಬ್ಬರು ಟೀಂ ಇಂಡಿಯಾ ಮುನ್ನಡೆಸುತ್ತಿರುವ ದಾಖಲೆ ಮಾಡಿದ್ದಾರೆ. ರೋಹಿತ್ ಶರ್ಮಾಗೆ ಕೊರೋನಾ ಆಗಿರುವುದರಿಂದ ಬುಮ್ರಾರನ್ನು ನಾಯಕರಾಗಿ ನೇಮಿಸಲಾಗಿದೆ.

ಇನ್ನು, ಪಂದ್ಯದ ವಿಚಾರಕ್ಕೆ ಬಂದರೆ ರೋಹಿತ್ ಅನುಪಸ್ಥಿತಿಯಲ್ಲಿ ಹಿರಿಯ ಬ್ಯಾಟಿಗರಾದ ಕೊಹ್ಲಿ, ಪೂಜಾರ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದೆ. ಆದರೆ ಈ ಇಬ್ಬರೂ ಇತ್ತೀಚೆಗೆ ಸತತವಾಗಿ ರನ್ ಗಳಿಸುವುದನ್ನು ಮರೆತಿರುವುದೇ ದೊಡ್ಡ ತಲೆನೋವಾಗಿದೆ. ಇಂಗ್ಲೆಂಡ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವುದು ಸುಲಭದ ಮಾತಲ್ಲ. ಇದಕ್ಕೆ ಟೀಂ ಇಂಡಿಯಾ ತನ್ನ ಖ್ಯಾತಿಗೆ ತಕ್ಕ ಆಟವಾಡಬೇಕಾಗುತ್ತದೆ.

ಅದರಲ್ಲೂ ಮುಖ್ಯವಾಗಿ ವೇಗದ ಪಿಚ್ ಗೆ ಹೆಸರು ವಾಸಿಯಾಗುವ ಕಾರಣಕ್ಕೆ ಎಡ್ಜ್ ಬಾಸ್ಟನ್ ಅಂಗಣದಲ್ಲಿ ಭಾರತ ಮೂವರು ವೇಗಿಗೊಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಪೈಕಿ ಯಾರು ಸ್ಥಾನ ಪಡೆಯುತ್ತಾರೆ ಕಾದು ನೋಡಬೇಕಿದೆ. ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದ ಶ್ರೀಕರ್ ಭರತ್-ಶುಬ್ನಂ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 3.00 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ