ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ರೋಹಿತ್ ಪುತ್ರಿ ಸಮೈರಾ
ಲೀಸೆಸ್ಟರ್ ನಲ್ಲಿ ತಾಯಿ ಜೊತೆ ಹೋಟೆಲ್ ನಿಂದ ಬರುತ್ತಿದ್ದಾಗ ರೋಹಿತ್ ಪುತ್ರಿಗೆ ಫೋಟೋಗ್ರಾಫರ್ ಗಳು ತಂದೆ ಹೇಗಿದ್ದಾರೆ ಎಂದು ಪ್ರಶ್ನಿಸಿದರು.
ಇದಕ್ಕೆ ಅಮ್ಮನ ಜೊತೆ ಹೋಗುತ್ತಿದ್ದ ಸಮೈರಾ ಒಂದು ಕ್ಷಣ ಕ್ಯಾಮರಾ ಮುಂದೆ ನಿಂತು ನನ್ನ ತಂದೆ ರೂಂನಲ್ಲಿ ರೆಸ್ಟ್ ಮಾಡ್ತಿದ್ದಾರೆ ಎಂದು ಕ್ಯೂಟ್ ಆಗಿ ಹೇಳಿ ತೆರಳಿದ್ದಾಳೆ. ಸಮೈರಾ ಮುದ್ದು ಮುದ್ದಾಗಿ ತಂದೆಯ ಬಗ್ಗೆ ಹೇಳಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.