ಬಿಸಿಸಿಐ ಆದೇಶಕ್ಕೆ ಕಿಮ್ಮತ್ತು ಕೊಡದ ಕೊಹ್ಲಿ, ರಿಷಬ್ ಪಂತ್
ಕೊರೋನಾ ಹರಡದಂತೆ ತಡೆಯಲು ಬಿಸಿಸಿಐ ಇಂತಹದ್ದೊಂದು ಆದೇಶ ನೀಡಿತ್ತು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ನೀಡಿದ ಬೆನ್ನಲ್ಲೇ ಬಿಸಿಸಿಐ ಇಂತಹದ್ದೊಂದು ಆದೇಶ ನೀಡಿತ್ತು. ವಿಪರ್ಯಾಸವೆಂದರೆ ರೋಹಿತ್ ಕೊರೋನಾ ಸೋಂಕಿಗೊಳಗಾದರು.
ಹಾಗಿದ್ದರೂ ಕೊಹ್ಲಿ, ರಿಷಬ್ ಪಂತ್ ಬಿಸಿಸಿಐ ನಿಯಮಕ್ಕೆ ಕ್ಯಾರೇ ಎಂದಿಲ್ಲ. ಅಭ್ಯಾಸದ ನಡುವೆ ತಮ್ಮ ಬಳಿ ಬರುವ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್ ನೀಡುವ ಮೂಲಕ ಇಬ್ಬರೂ ಕ್ರಿಕೆಟಿಗರು ನಿಯಮ ಮುರಿದಿದ್ದಾರೆ. ಹೀಗಾಗಿ ಇವರ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.