ಅಮೆರಿಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಟಿ 20 ಸರಣಿ ಸಾಧ್ಯತೆ

ಶುಕ್ರವಾರ, 29 ಜುಲೈ 2016 (15:52 IST)
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಮುಗಿದ ಕೂಡಲೇ ಭಾರತ ಕ್ರಿಕೆಟ್ ತಂಡವು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್‌ನಲ್ಲಿ ಪ್ರಸಕ್ತ ವಿಶ್ವ ಟಿ 20 ಚಾಂಪಿಯನ್ನರಾದ ವೆಸ್ಟ್ ಇಂಡೀಸ್ ವಿರುದ್ಧ ಟಿ 20 ಸರಣಿಯನ್ನು ಆಡುವ ನಿರೀಕ್ಷೆಯಿದೆ.
 
ಬಿಸಿಸಿಐ ಅಧಿಕಾರಿಗಳು ವೆಸ್ಟ್ ಇಂಡೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಆಗಸ್ಟ್ ಕೊನೆಯ ವಾರದಲ್ಲಿ ಟಿ 20 ಸರಣಿಯನ್ನು ಆಡುವ ಸಾಧ್ಯತೆ ಕುರಿತು ಚರ್ಚಿಸಲಿದ್ದಾರೆ.
 
 ಬ್ರೊವಾರ್ಡ್ ಪಾರ್ಕ್ಸ್ ಮತ್ತು ರಿಕ್ರಿಯೇಶನ್ ಮ್ಯಾನೇಜರ್ ಡಂಕನ್ ಫಿಂಚ್ ಈ ಕುರಿತು ವೆಸ್ಟ್ ಇಂಡೀಸ್ ಕ್ರಿಕೆಟ್ ಅಧಿಕಾರಿಗಳು ಟಿ 20 ಪಂದ್ಯಗಳನ್ನು ಆಯೋಜಿಸುವ ಅವಕಾಶ ಕೋರಿ ತಮಗೆ ಪತ್ರ ಬರೆದಿದ್ದಾರೆಂದು ತಿಳಿಸಿದರು.
 
ಪ್ರಸಕ್ತ ಭಾರತ ಟೆಸ್ಟ್ ತಂಡದ 15 ಆಟಗಾರರ ಪೈಕಿ 8 ಆಟಗಾರರು ಟಿ 20 ತಂಡದ ಕಾಯಂ ಸದಸ್ಯರಾಗಿದ್ದಾರೆ. ವೆಸ್ಟ್ ಇಂಡೀಸ್ ಅಮೆರಿಕದಲ್ಲಿ ಸರಣಿ ನಡೆಸುವ ಕುರಿತು ಐಸಿಸಿ ಅನುಮತಿಗಾಗಿ ಸಂಪರ್ಕಿಸಿದೆ. 2012ರಲ್ಲಿ ನ್ಯೂಜಿಲೆಂಡ್ ಫ್ಲೋರಿಡಾದಲ್ಲಿ ಎರಡು ಪಂದ್ಯಗಳ ಸರಣಿಯನ್ನು ಶ್ರೀಲಂಕಾ ವಿರುದ್ಧ ಆಡಿತ್ತು. ಈ ಕುರಿತು ಒಪ್ಪಂದ ಏರ್ಪಟ್ಟರೆ, ಅಮೆರಿಕದಲ್ಲಿ ಎರಡು ಪೂರ್ಣ ತಂಡಗಳು ನಾಲ್ಕು ವರ್ಷಗಳಲ್ಲಿ ಆಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ