ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಮಂಗಳವಾರ, 24 ಜನವರಿ 2023 (20:59 IST)
ಇಂಧೋರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 90 ರನ್ ಗಳಿಂದ ಗೆಲ್ಲುವುದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಬಳಿಕ ಟೀಂ ಇಂಡಿಯಾ ಈಗ ಮತ್ತೊಂದು ಸರಣಿ ವೈಟ್ ವಾಶ್ ಮಾಡಿಕೊಂಡಿದೆ. ಗೆಲ್ಲಲು 386 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ರನ್ ಗಳಿಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ ಆರಂಭದಲ್ಲಿ ದಿಟ್ಟ ಹೋರಾಟ ನಡೆಸಿತು. ಡೆವನ್ ಕಾನ್ವೇ 100 ಎಸೆತಗಳಿಂದ 138 ರನ್ ಗಳಿಸಿ ಔಟಾದೊಡನೆ ಟೀಂ ಇಂಡಿಯಾ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿತು. ಈ ನಡುವೆ ಹೆನ್ರಿ ನಿಕಲಸ್ 42 ರನ್ ಗಳಿಸಿದರು. ಆದರೆ ಕೆಳ ಕ್ರಮಾಂಕದ ಬ್ಯಾಟಿಗರು ಕೈ ಕೊಟ್ಟಿದ್ದು ನ್ಯೂಜಿಲೆಂಡ್ ಗೆ ಸಂಕಷ್ಟ ತಂದಿತು. ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ (34 ರನ್) ಕೊಂಚ ಪ್ರತಿರೋಧ ತೋರಿದರು. ಅಂತಿಮವಾಗಿ 41.2 ಓವರ್ ಗಳಲ್ಲಿ ನ್ಯೂಜಿಲೆಂಡ್ 295 ರನ್ ಗಳಿಗೆ ಆಲೌಟ್ ಆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ