ಭಾರತ-ದ.ಆಫ್ರಿಕಾ ಏಕದಿನ ಸರಣಿ ರದ್ದು

ಶನಿವಾರ, 14 ಮಾರ್ಚ್ 2020 (09:32 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿ  ರದ್ದಾಗಿದೆ. ಮೊದಲ ಪಂದ್ಯ ಏಕದಿನ ಮಳೆಯಿಂದಾಗಿ ರದ್ದಾಗಿತ್ತು.


ಉಳಿದ ಎರಡು ಏಕದಿನ ಪಂದ್ಯ ಲಕ್ನೋ ಮತ್ತು ಕೋಲ್ಕೊತ್ತಾದಲ್ಲಿ ನಡೆಯಬೇಕಿತ್ತು. ಮೊದಲಿಗೆ ಈ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು.

ಆದರೆ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಆಫ್ರಿಕಾ ಕ್ರಿಕೆಟಿಗರು ಸರಣಿ ಮುಂದುವರಿಸಲು ಹಿಂದೇಟು ಹಾಕಿದ್ದಾರೆ. ಕೊರೋನಾ ಭೀತಿ ತಗ್ಗಿದ ಮೇಲೆ ಉಳಿದ ಪಂದ್ಯಗಳನ್ನು ಆಡಲು ಮತ್ತೆ ಆಫ್ರಿಕಾ ಕ್ರಿಕೆಟಿಗರು ಭಾರತಕ್ಕೆ ಬರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ