India-SA ODI: ಎಂಟಕ್ಕೆ ಎಂಟು! ಗೆದ್ದು ಸೇಡು ತೀರಿಸಿಕೊಂಡ ಸೌತ್ ಆಫ್ರಿಕಾ
ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿದೆ. ಇದೀಗ ಅಂತಿಮ ಪಂದ್ಯಕ್ಕೆ ಫೈನಲ್ ನ ಕಳೆ ಬಂದಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ನಿಂದಾಗಿ 211 ಕ್ಕೆ ಆಲೌಟ್ ಆಗಿತ್ತು. ಸಾಯಿ ಸುದರ್ಶನ್ ಸತತ ಎರಡನೇ ಬಾರಿಗೆ ಅರ್ಧಶತಕ (62) ಸಿಡಿಸಿ ದಾಖಲೆ ಮಾಡಿದರು. ನಾಯಕ ಕೆಎಲ್ ರಾಹುಲ್ ಜವಾಬ್ಧಾರಿಯುತ ಆಟವಾಡಿ 56 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಆಫ್ರಿಕಾ ಮೊದಲ ವಿಕೆಟ್ ಗೆ ದಾಖಲೆಯ 130 ರನ್ ಗಳ ಜೊತೆಯಾಟವಾಡಿತು. ಆರಂಭಿಕ ಟೋನಿ ಡಿ ಝೋರ್ಝಿ ಅಜೇಯ 119 ರನ್ ಗಳಿಸಿದರು. ಹೆಂಡ್ರಿಕ್ಸ್ 52 ರನ್ ಗಳ ಕೊಡುಗೆ ನೀಡಿದರು. ಇದರಿಂದಾಗಿ ಆಫ್ರಿಕಾ 42.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದರು. ಭಾರತದ ಪರ ಅರ್ಷ್ ದೀಪ್ ಸಿಂಗ್, ರಿಂಕು ಸಿಂಗ್ ತಲಾ 1 ವಿಕಟ್ ಕಬಳಿಸಿದರು.