ಒಂದೇ ಸರಣಿಯಲ್ಲಿ ಗೌತಮ್ ಗಂಭೀರ್ ಕೋಚ್ ಆಗಿ ಟೀಂ ಇಂಡಿಯಾಕ್ಕೆ ಏನೆಲ್ಲಾ ಕ್ಲೈಮ್ಯಾಕ್ಸ್

Krishnaveni K

ಶನಿವಾರ, 3 ಆಗಸ್ಟ್ 2024 (08:59 IST)
Photo Credit: BCCI
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಟೈನಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಮೊದಲ ಸರಣಿಯಲ್ಲೇ ಗೌತಮ್ ಗಂಭೀರ್ ಕೋಚ್ ಆಗಿ ಟೀಂ ಇಂಡಿಯಾ ಕ್ಲೈಮ್ಯಾಕ್ಸ್ ಗಳ ಡ್ರಾಮಾವನ್ನೇ ನೋಡುತ್ತಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ 47.5 ಓವರ್ ಗಳಲ್ಲಿ 230 ರನ್ ಗಳಿಗೇ ಆಲೌಟ್ ಆಗುವ ಮೂಲಕ ಪಂದ್ಯ ಟೈ ಆಯಿತು. ಕೊನೆಯಲ್ಲಿ 18 ಎಸೆತಗಳಲ್ಲಿ ಭಾರತ 5 ರನ್ ಗಳಿಸಬೇಕಿತ್ತು. ಎರಡು ವಿಕೆಟ್ ಕೂಡಾ ಇತ್ತು. ಸುಲಭವಾಗಿ ಪಂದ್ಯ ಗೆಲ್ಲಬಹುದಿತ್ತು.

ಶಿವಂ ದುಬೆ ಕ್ರೀಸ್ ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ರನ್ ಬರಲಿಲ್ಲ. ಮೂರನೇ ಎಸೆತದಲ್ಲಿ ದುಬೆ ಬೌಂಡರಿ ಗಳಿಸಿದರು. ಆಗ ಭಾರತ ಸುಲಭವಾಗಿ ಗೆಲ್ಲಬಹುದು ಎಂದೆ ಎಲ್ಲ ಲೆಕ್ಕಾಚಾರವಾಗಿತ್ತು. 1 ರನ್ ಗಳಿಸಬೇಕಿತ್ತು ಕೈಯಲ್ಲಿ ಎರಡು ವಿಕೆಟ್ ಕೂಡಾ ಇತ್ತು. ಆದರೆ ಈ ಹಂತದಲ್ಲಿ ದುಬೆ ಔಟಾದರು. ನಂತರ ಬಂದ ಅರ್ಷ್ ದೀಪ್ ಸಿಂಗ್ ಬಂದ ಎಸೆತದಲ್ಲೇ ಔಟಾದರು. ಇದರೊಂದಿಗೆ ಪಂದ್ಯ ಟೈ ಆಯಿತು.

ಈ ಮೊದಲು ಟಿ20 ಸರಣಿಯಲ್ಲೂ ಕೊನೆಯ ಪಂದ್ಯ ಟೈ ಆಗಿ ಕೊನೆಗೆ ಸೂಪರ್ ಓವರ್ ನಲ್ಲಿ ಭಾರತ ಗೆದ್ದಿತ್ತು. ಇಲ್ಲಿ ಸೂಪರ್ ಓವರ್ ಸೌಲಭ್ಯವಿಲ್ಲ. ಹೀಗಾಗಿ ಪಂದ್ಯ ಟೈಯಲ್ಲಿ ಮುಕ್ತಾಯವಾಗಿದೆ. ಗೌತಮ್ ಗಂಭೀರ್ ಕೋಚ್ ಆಗಿ ಮೊದಲ ಸರಣಿಯಲ್ಲೇ ಭಾರತ ತಂಡ ಎಲ್ಲಾ ಪಂದ್ಯಗಳಲ್ಲೂ ರೋಚಕತೆಯ ಪರಮಾವಧಿ ಪ್ರದರ್ಶನ ಮಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ