IND vs SA test: ಮೈದಾನದಲ್ಲಿ ‘ರಾಮ’ನಾದ ವಿರಾಟ್ ಕೊಹ್ಲಿ
ಫೀಲ್ಡಿಂಗ್ ಮಾಡುತ್ತಿದ್ದಾಗ ಕೊಹ್ಲಿ ಶ್ರೀರಾಮನಂತೆ ಆಕ್ಟ್ ಮಾಡಿದ್ದಾರೆ. ಆಫ್ರಿಕಾ ಬ್ಯಾಟಿಗ ಕೇಶವ್ ಮಹಾರಾಜ್ ಕ್ರೀಸ್ ಗೆ ಬಂದಾಗ ಪ್ರತೀ ಬಾರಿ ಆದಿ ಪುರುಷ್ ಸಿನಿಮಾದ ರಾಮ್ ಸಿಯಾ ರಾಮ್ ಹಾಡು ಹಾಕುತ್ತಾರೆ.
ಈ ಬಾರಿಯೂ ಕೇಶವ್ ಮೈದಾನಕ್ಕೆ ಬರುವಾಗ ಈ ಹಾಡನ್ನು ಹಾಕಿದ್ದಾರೆ. ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಕೊಂಚ ಫನ್ನಿ ಮೂಡ್ ನಲ್ಲಿದ್ದರು. ಹೀಗಾಗಿ ಶ್ರೀರಾಮನಂತೆ ಬಿಲ್ಲು ಬಿಡುವ ರೀತಿ ನಟನೆ ಮಾಡಿ ಬಳಿಕ ಕೈ ಮುಗಿದು ಶ್ರೀರಾಮಚಂದ್ರನಿಗೆ ನಮಿಸಿದ್ದಾರೆ.
ಕೊಹ್ಲಿಯ ಈ ಆಕ್ಟ್ ಎಲ್ಲರ ಗಮನ ಸೆಳೆದಿದೆ. ಟೆಸ್ಟ್ ಕ್ರಿಕೆಟ್ ಬೋರ್ ಆಗದಂತೆ ಕೊಹ್ಲಿ ಈ ರೀತಿ ಮೈದಾನದಲ್ಲಿ ಪ್ರೇಕ್ಷಕರನ್ನು ಅನೇಕ ರೀತಿ ರಂಜಿಸಿದ್ದಾರೆ. ಈ ಬಾರಿಯೂ ಅವರ ನಟನೆಯನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ.