ಎರಡನೇ ಟಿ 20ಯಲ್ಲಿ ತಂಡದ ಸರಣಿ ಡ್ರಾದ ಗೆಲುವಿನಲ್ಲಿ ಅರ್ಧಶತಕ ಬಾರಿಸಿದ ಮಂದೀಪ್ ಸಿಂಗ್ ತಾವು ಒತ್ತಡದಿಂದಾಗಿ ಪಂದ್ಯದ ಹಿಂದಿನ ದಿನ ನಿದ್ರೆ ರಹಿತ ರಾತ್ರಿಗಳನ್ನು ಕಳೆದಿದ್ದಾಗಿ ಹೇಳಿದ್ದು, ತಾವು ಮೈದಾನಕ್ಕೆ ಇಳಿದ ಕ್ಷಣವೇ ಆ ಒತ್ತಡ ಮಾಯವಾಯಿತು ಎಂದಿದ್ದಾರೆ.
ಸಾಧಾರಣ ಮೊತ್ತ 100 ರನ್ ಚೇಸ್‌ನಲ್ಲಿ ಅಜೇಯ 52 ರನ್ ಗಳಿಸಿದ ಮಂದೀಪ್, ತಾವು ಪಂದ್ಯಕ್ಕೆ ಮುಂಚೆ ಅನುಭವಿಸಿದ ಆತಂಕವು ಬ್ಯಾಟಿಂಗ್‌ಗಿಳಿದಾಗ ಅಚ್ಚರಿಯಂತೆ ಮಾಯವಾಯಿತು ಎಂದರು. ಆಯ್ಕೆದಾರರು ನಮ್ಮನ್ನು ಗಮನಿಸುವುದರಿಂದ ಮತ್ತು ಪಂದ್ಯ ಗೆಲ್ಲುವ ಒತ್ತಡವು ನಿದ್ರೆರಹಿತ ರಾತ್ರಿ ಕಳೆಯುವಂತೆ ಮಾಡಿತು. ಅದು ಒತ್ತಡ ಅಥವಾ ಆತಂಕವಾಗಿರಲಿ, ಬ್ಯಾಟಿಂಗ್‌ಗೆ ಇಳಿದಾಗ ಸುಲಭವಾಗಿ ಮಾಯವಾಯಿತು ಎಂದಿದ್ದಾರೆ.