ಇಂದು ಅರ್ಧಗಂಟೆ ಮುಂಚಿತವಾಗಿ ಆರಂಭವಾಗಲಿದೆ ಭಾರತ-ವಿಂಡೀಸ್ ಟೆಸ್ಟ್

ಭಾನುವಾರ, 23 ಜುಲೈ 2023 (08:30 IST)
Photo Courtesy: Twitter
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ನಾಲ್ಕನೇ ದಿನವಾದ ಇಂದು ಅರ್ಧಗಂಟೆ ಮುಂಚಿತವಾಗಿ ಆರಂಭವಾಗಲಿದೆ.

ಭಾರತ-ವಿಂಡೀಸ್ ಟೆಸ್ಟ್ ಪಂದ್ಯಕ್ಕೆ ಮೂರನೇ ದಿನ ಮಳೆ ಅಡ್ಡಿಯಾಗಿತ್ತು. ಇದರಿಂದ ಕೆಲವು ಓವರ್ ಗಳು ನಷ್ಟವಾಗಿತ್ತು. ಹೀಗಾಗಿ ಆ ನಷ್ಟ ಭರ್ತಿ ಮಾಡಲು ಇಂದು ಅರ್ಧಗಂಟೆ ಮುಂಚಿತವಾಗಿ ಪಂದ್ಯ ಆರಂಭವಾಗಲಿದೆ.

ವೆಸ್ಟ್ ಇಂಡೀಸ್ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದು, ಭಾರತ ಈ ಪಂದ್ಯವನ್ನು ಗೆಲ್ಲಬೇಕೆಂದರೆ ಬೇಗನೇ ವಿಕೆಟ್ ಪಡೆಯಲೇಬೇಕಾದ ಅನಿವಾರ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ