ಭಾರತ-ವೆಸ್ಟ್ ಇಂಡೀಸ್: ಬ್ರಾತ್ ವೈಟ್-ಮೆಕೆಂಝಿ ಪಾರ್ಟನರ್ ಶಿಪ್ ಮುರಿದ ಮುಕೇಶ್

ಶನಿವಾರ, 22 ಜುಲೈ 2023 (20:23 IST)
WD
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ತಲೆನೋವಾಗಿದ್ದ ವಿಂಡೀಸ್ ಬ್ಯಾಟಿಗರಾದ ಮೆಕೆಂಝಿ-ಬ್ರಾತ್ ವೈಟ್ ಜೊತೆಯಾಟ ಮುರಿಯುವಲ್ಲಿ ವೇಗಿ ಮುಕೇಶ್ ಕುಮಾರ್ ಯಶಸ್ವಿಯಾದರು.

ನಿನ್ನೆ ಎರಡನೇ ದಿನದಂತ್ಯಕ್ಕೆ ವಿಂಡೀಸ್ ಮೊದಲ ಇನಿಂಗ್ಸ್ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು. ಇದಾದ ಬಳಿಕ ಜೊತೆಯಾದ ನಾಯಕ ಬ್ರಾತ್ ವೈಟ್ ಮತ್ತು ಮೆಕೆಂಝಿ ಜೋಡಿ ಇಂದೂ ಕೂಡಾ ಮೊದಲ ಅವಧಿಯಲ್ಲಿ ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದರು. 105 ಎಸೆತಗಳಿಂದ 46 ರನ್ ಗಳ ಜೊತೆಯಾಟವಾಡುತ್ತಿದ್ದ ಈ ಜೋಡಿಯನ್ನು ಮುರಿಯುವಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಮುಕೇಶ್ ಕುಮಾರ್ ಯಶಸ್ವಿಯಾದರು. ಮೆಕೆಂಝಿ 32 ರನ್ ಗಳಿಸಿದ್ದಾಗ  ವಿಕೆಟ್ ಕೀಪರ್ ಇಶಾನ್ ಕಿಶನ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರೊಂದಿಗೆ ಮುಕೇಶ್ ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಾಧನೆ ಮಾಡಿದರು.

ಇದೀಗ ಬ್ರಾತ್ ವೈಟ್ 49 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಷ್ಟರಲ್ಲಿ ಮಳೆ ಆಗಮನವಾಗಿದ್ದು, ಪಂದ್ಯ ಸದ್ಯಕ್ಕೆ ಸ್ಥಗಿತವಾಗಿದೆ. ವಿಂಡೀಸ್ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ್ದು ಇನ್ನೂ 321 ರನ್ ಗಳ ಹಿನ್ನಡೆಯಲ್ಲಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 438 ರನ್ ಗಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ