ಅದೃಷ್ಟ ಚೆನ್ನಾಗಿತ್ತು, ಟೀಂ ಇಂಡಿಯಾ ಮಾನ ಉಳಿಯಿತು
ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 322 ರನ್ ನೀಡಿತ್ತು. ಇದು ಒಂದು ಪೈಪೋಟಿಯು ಮೊತ್ತವೇ ಆಗಿತ್ತು. ಆದರೆ ಮೊದಲ ಪಂದ್ಯದ ಹೀರೋ ಶಿಮ್ರೋನ್ ಹೆಟ್ ಮೇರ್ ಮತ್ತೆ ಸ್ಪೋಟಕ ಬ್ಯಾಟಿಂಗ್ ನಡೆಸಿ ವಿಂಡೀಸ್ ಗೆಲುವಿನ ಗುರಿ ಸುಲಭವಾಗಿಸಿದರು. ಒಂದು ಹಂತದಲ್ಲಿ ವಿಂಡೀಸ್ 45 ಓವರ್ ಗಳಲ್ಲೇ ಗೆಲ್ಲುವ ಸೂಚನೆ ನೀಡಿತ್ತು.
ಆದರೆ ಹೆಟ್ ಮ್ಯಾರ್ ವಿಕೆಟ್ ಕಳೆದುಕೊಂಡಾಗ ಪಂದ್ಯಕ್ಕೆ ತಿರುವು ಸಿಕ್ಕಿತು. ಹಾಗಿದ್ದರೂ ಶೈ ಹೋಪ್ ಶತಕ ಸಿಡಿಸಿ ತಂಡಕ್ಕೆ ಭರವಸೆ ಮೂಡಿಸಿದರು. ಕೊನೆಯ ಎಸೆತದವರೆಗೂ ಶಕ್ತಿಮೀರಿ ಹೋರಾಡಿದ ಹೋಪ್ ಅಂತಿಮವಾಗಿ ಗೆಲುವಿಗೆ ಐದು ರನ್ ಬೇಕಾಗಿದ್ದಾಗ ಸಿಕ್ಸರ್ ಸಿಡಿಸಲು ವಿಫಲರಾಗಿ ಬೌಂಡರಿಯೊಂದಿಗೆ ಪಂದ್ಯ ಟೈ ಮಾಡಿಕೊಂಡರು. ಇತ್ತ ಟೀಂ ಇಂಡಿಯಾ ಸೋಲಿನ ಅವಮಾನ ತಪ್ಪಿಸಿಕೊಂಡು ಸಮಾಧಾನಪಟ್ಟುಕೊಂಡಿತು.