IND v/s SA Boxing Day test: ದ್ರಾವಿಡ್ ಎದುರೇ ಅವರ ದಾಖಲೆ ಮುರಿಯಲು ಕೊಹ್ಲಿಗೆ ಅವಕಾಶ

ಮಂಗಳವಾರ, 26 ಡಿಸೆಂಬರ್ 2023 (08:40 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಸರಣಿ ಇಂದಿನಿಂದ ಸೆಂಚೂರಿಯನ್ ಮೈದಾನದಲ್ಲಿ ಆರಂಭವಾಗಲಿದೆ.

ಈ ಸರಣಿಯನ್ನು ಭಾರತ ಗೆದ್ದುಕೊಂಡರೆ ಆಫ್ರಿಕಾ ನಾಡಿನಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ದಾಖಲೆಯಾಗಲಿದೆ. ಕಳೆದ ಬಾರಿ ದ್ರಾವಿಡ್ ಕೋಚ್ ಆಗಿ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಸೋಲಾಗಿತ್ತು. ಆದರೆ ಈ ಬಾರಿ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಇನ್ನೊಂದೆಡೆ ಭಾರತದ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿಗೆ ಈ ಪಂದ್ಯದಲ್ಲಿ ಕೋಚ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶ ಸಿಕ್ಕಿದೆ.

ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 1236 ರನ್ ಕಲೆ ಹಾಕಿದ್ದಾರೆ.ಇನ್ನು 71 ರನ್ ಕಲೆ ಹಾಕಿದರೆ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ದ್ರಾವಿಡ್, ಸೆಹ್ವಾಗ್ ದಾಖಲೆಯನ್ನು ಮುರಿಯಲಿದ್ದಾರೆ. ಆದರೆ ಗರಿಷ್ಠ ರನ್ ಗಳಿಸಿ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸಚಿನ್ ಇದ್ದಾರೆ. ಅವರು 1741 ರನ್ ಗಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ