ಐಪಿಎಲ್ 2023: ಸಮಾನದುಃಖಿ ಹೈದರಾಬಾದ್-ಡೆಲ್ಲಿ ನಡುವೆ ಇಂದಿನ ಹೋರಾಟ

ಸೋಮವಾರ, 24 ಏಪ್ರಿಲ್ 2023 (06:30 IST)
ಹೈದರಾಬಾದ್: ಐಪಿಎಲ್ 2023 ರಲ್ಲಿ ಇಂದು ಸಮಾನದುಃಖಿಗಳಾದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಸತತ ನಾಲ್ಕು ಸೋಲುಗಳ ನಂತರ ಕಳೆದ ಪಂದ್ಯದಲ್ಲಿ ಗೆಲುವಿನ ನಿಟ್ಟುಸಿರು ಬಿಟ್ಟಿತ್ತು. ಹಾಗಿದ್ದರೂ ಅಂಕ ಪಟ್ಟಿಯಲ್ಲಿ ಅದು ಕೊನೆಯ 10 ನೇ ಸ್ಥಾನದಲ್ಲಿದೆ.

ಡೆಲ್ಲಿಗೆ ಹೋಲಿಸಿದರೆ ಹೈದರಾಬಾದ್ ಕೊಂಚ ಮೇಲ್ಪಂಕ್ತಿಯಲ್ಲಿದೆ. ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸಿದೆ. ಹಾಗಿದ್ದರೂ ಹೈದರಾಬಾದ್ 9 ನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳ ನಡುವೆ ಯಾರು ಗೆಲ್ಲುತ್ತಾರೆ ಎಂದು ನೋಡಲು ಇಂದು ಸಂಜೆ 7.30 ರ ಪಂದ್ಯ ವೀಕ್ಷಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ