ಐಪಿಎಲ್ 2023: ಇಂದು ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿರುವ ಆರ್ ಸಿಬಿ ಪ್ಲೇಯರ್ಸ್

ಭಾನುವಾರ, 23 ಏಪ್ರಿಲ್ 2023 (06:50 IST)
ಬೆಂಗಳೂರು: ಐಪಿಎಲ್ ನಲ್ಲಿ ಪ್ರತೀ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಪಂದ್ಯವನ್ನು ಹಸಿರು ಸಮವಸ್ತ್ರ ತೊಟ್ಟು ಆಡುತ್ತದೆ.

ಈ ಬಾರಿಯ ಐಪಿಎಲ್ ನಲ್ಲಿ ಇಂದು ಆರ್ ಸಿಬಿ ಹಸಿರು ದಿರಿಸಿನಲ್ಲಿ ಕಣಕ್ಕಿಳಿಯಲಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ ಸಿಬಿ ರಾಜಸ್ಥಾನ್‍ ತಂಡವನ್ನು ಎದುರಿಸಲಿದೆ.

ಹಸಿರು ಉಳಿಸಿ ಸಂದೇಶ ನೀಡುವ ಸಲುವಾಗಿ ಆರ್ ಸಿಬಿ ಆಟಗಾರರು ಪ್ರತೀ ಋತುವಿನಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಾರೆ. ಹೀಗಾಗಿ ಇಂದು ಚಿನ್ನಸ್ವಾಮಿ ಮೈದಾನ ಹಸಿರುಮಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ