ಐಪಿಎಲ್ 2023: ಆರ್ ಸಿಬಿಗೆ ಇಂದು ರಾಜಸ್ಥಾನ್ ರಾಯಲ್ಸ್ ಎದುರಾಳಿ

ಭಾನುವಾರ, 23 ಏಪ್ರಿಲ್ 2023 (06:30 IST)
ಬೆಂಗಳೂರು: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಬಲ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಆರ್ ಸಿಬಿ ಸತತ ಎರಡು ಸೋಲುಗಳ ಬಳಿಕ ಕಳೆದ ಪಂದ್ಯವನ್ನು ಗೆದ್ದು ಬೀಗಿತ್ತು. ಈ ಪಂದ್ಯಕ್ಕೆ ನಾಯಕ ಫಾ ಡು ಪ್ಲೆಸಿಸ್ ಪೂರ್ಣ ಪ್ರಮಾಣದಲ್ಲಿ ಹಾಜರಾಗುವ ನಿರೀಕ್ಷೆಯಿದೆ. ಅಂಕಪಟ್ಟಿಯಲ್ಲಿ ಸುಧಾರಿಸಲು ಆರ್ ಸಿಬಿಗೆ ಇದು ಉತ್ತಮ ಅವಕಾಶ.

ಆದರೆ ರಾಜಸ್ಥಾನ್ ಇದುವರೆಗೆ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಕಳೆದ ಪಂದ್ಯದಲ್ಲಿ ಕೆಲವೊಂದು ಆಟಗಾರರ ತಪ್ಪಿನಿಂದ ಸೋತಿದ್ದು ಬಿಟ್ಟರೆ ರಾಜಸ್ಥಾನ್ ರಾಜನಂತೇ ಮೆರೆಯುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪೈಪೋಟಿಯಿರಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ