ಐಪಿಎಲ್ 2023: ಸಿಎಸ್ ಕೆಗೆ ಇಂದು ಡೆಲ್ಲಿ ಎದುರಾಳಿ
ಲೀಗ್ ಪಂದ್ಯಗಳಲ್ಲಿ ನಿರ್ಣಾಯಕ ಘಟ್ಟ ಇದಾಗಿದೆ. ಹೀಗಾಗಿ ಚೆನ್ನೈಗೆ ಗೆಲುವು ಅನಿವಾರ್ಯ. ಇದುವರೆಗೆ ಆಡಿದ 11 ಪಂದ್ಯಗಳಿಂದ ಚೆನ್ನೈ 7 ಗೆಲುವು ಸಂಪಾದಿಸಿದೆ. ಗೆದ್ದರೆ ಎರಡನೇ ಸ್ಥಾನ ಖಚಿತವಾಗಲಿದೆ.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಸತತ ಸೋಲುಗಳ ನಂತರ ಇದೀಗ ಎರಡು ಗೆಲುವು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ ಹ್ಯಾಟ್ರಿಕ್ ಗೆಲುವು ಸಂಪಾದಿಸಿದಂತಾಗುತ್ತದೆ. ಡೆಲ್ಲಿ 10 ಪಂದ್ಯಗಳಿಂದ 4 ಗೆಲುವು ತನ್ನದಾಗಿಸಿಕೊಂಡಿತ್ತು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.