ಐಪಿಎಲ್ 2023: ಮುಂಬೈ ವಿರುದ್ಧ ಲಕ್ನೋಗೆ ಥ್ರಿಲ್ಲಿಂಗ್ ವಿಕ್ಟರಿ
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಕೃನಾಲ್ ಪಾಂಡ್ಯ 49, ಮಾರ್ಕಸ್ ಸ್ಟಾಯ್ನಿಸ್ 89 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತಷ್ಟೇ. ಮುಂಬೈಗೆ ರೋಹಿತ್-ಇಶಾನ್ ಉತ್ತಮ ಆರಂಭ ನೀಡಿದ್ದರು. ಇಶಾನ್ 59, ರೋಹಿತ್ 37 ರನ್ ಗಳಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ 19 ಎಸೆತಗಳಿಂದ 32 ರನ್ ಚಚ್ಚಿದರು.ಆದರೆ ಕೊನೆಯ ಓವರ್ ನಲ್ಲಿ 11 ರನ್ ಬೇಕಾಗಿದ್ದಾಗ ದಾಳಿಗಿಳಿದ ಮೊಹ್ಸಿನ್ ಖಾನ್ ಕೇವಲ 5 ರನ್ ನೀಡಿ ತಂಡದ ಗೆಲುವಿನ ರೂವಾರಿಯಾದರು.