ಐಪಿಎಲ್ 2023: ಗೆಲುವಿನ ನಾಗಲೋಟ ಮುಂದುವರಿಸುವ ವಿಶ್ವಾಸದಲ್ಲಿ ಮುಂಬೈ

ಶನಿವಾರ, 22 ಏಪ್ರಿಲ್ 2023 (06:40 IST)
ಮುಂಬೈ: ಐಪಿಎಲ್ 2023 ರಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಆತ್ಮವಿಶ್ವಾಸದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯವಾಡಲಿದೆ.

ಮುಂಬೈ ಆರಂಭದಲ್ಲಿ ಎರಡು ಸೋಲು ಕಂಡರೂ ಬಳಿಕ ಮೂರು ಸತತ ಗೆಲುವು ಕಂಡಿತ್ತು. ಹಾಗಿದ್ದರೂ ಉಪನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್ ಸುಧಾರಿಸಿಲ್ಲ.

ಇನ್ನೊಂದೆಡೆ ಪಂಜಾಬ್ ಆರಂಭದಲ್ಲಿ ಗೆಲುವು ಪಡೆದರೂ ಇತ್ತೀಚೆಗೆ ಯಾಕೋ ಕೊಂಚ ಸೊರಗಿದೆ. ಕಳೆದ ಪಂದ್ಯದಲ್ಲಿ  ಸೋಲು ಅನುಭವಿಸಿರುವ ಪಂಜಾಬ್ ಇದುವರೆಗೆ ಐದು ಪಂದ್ಯಗಳಿಂದ 2 ಗೆಲುವು ಮಾತ್ರ ಕಂಡಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ