ಐಪಿಎಲ್ 2023: ಮುಂಬೈ ಎದುರು ಪಂಜಾಬ್ ಗೆ ಥ್ರಿಲ್ಲಿಂಗ್ ಗೆಲುವು

ಭಾನುವಾರ, 23 ಏಪ್ರಿಲ್ 2023 (06:20 IST)
ಮುಂಬೈ: ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 13 ರನ್ ಗಳ ರೋಚಕ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಹರಪ್ರೀತ್ ಸಿಂಗ್ 41, ಸ್ಯಾಮ್ ಕ್ಯುರೇನ್ 55 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರೋಹಿತ್ ಶರ್ಮಾ 44,ಕ್ಯಾಮರೂನ್ ಗ್ರೀನ್ 67, ಸೂರ್ಯಕುಮಾರ್ ಯಾದವ್ 57 ರನ್ ಸಿಡಿಸಿದರು. ಆದರೆ ಕೊನೆಯ 2 ಓವರ್ ಗಳಲ್ಲಿ ಅರ್ಷ್ ದೀಪ್ ಸಿಂಗ್ ನಡೆಸಿದ ಶಿಸ್ತಿನ ದಾಳಿಯಿಂದಾಗಿ ಮುಂಬೈ ಕೊನೇ ಹಂತದಲ್ಲಿ ಪಂದ್ಯ ಕಳೆದುಕೊಳ್ಳಬೇಕಾಯಿತು. ಅರ್ಷ್ ದೀಪ್ 4 ವಿಕೆಟ್ ಕಬಳಿಸಿದರು. ಇದರೊಂದಿಗೆ ಮುಂಬೈ ಹ್ಯಾಟ್ರಿಕ್ ಗೆಲುವು ತಪ್ಪಿಸಿಕೊಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ