ಐಪಿಎಲ್ 2023: ಆರ್ ಸಿಬಿಗೆ ಕನ್ನಡಿಗ ಕೆಎಲ್ ರಾಹುಲ್ ಪಡೆಯ ಸವಾಲು

ಸೋಮವಾರ, 10 ಏಪ್ರಿಲ್ 2023 (07:50 IST)
ಬೆಂಗಳೂರು: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಕಳೆದ ಪಂದ್ಯದಲ್ಲಿ ಆರ್ ಸಿಬಿ ಹೀನಾಯ ಸೋಲು ಅನುಭವಿಸಿತ್ತು. ಆದರೆ ಅದಕ್ಕೆ ಮೊದಲು ನಡೆದಿದ್ದ ಬೆಂಗಳೂರಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ತವರಿನ ಅಂಗಳದಲ್ಲಿ ಮತ್ತೆ ಮಿಂಚುವ ವಿಶ್ವಾಸದಲ್ಲಿ ಫಾ ಡು ಪ್ಲೆಸಿಸ್ ಪಡೆಯಿದೆ.

ಇನ್ನೊಂದೆಡೆ ಕೆಎಲ್ ರಾಹುಲ್ ಗೂ ಇದು ತವರಿನ ಅಂಕಣ. ರಾಹುಲ್ ನೇತೃತ್ವದ ಲಕ್ನೋ ಇದುವರೆಗೆ 2 ಗೆಲುವು ಕಂಡುಕೊಂಡಿದೆ. ಒಂದು ಸೋಲು ಅನುಭವಿಸಿದೆ. ಫಾರ್ಮ್ ಕೊರತೆಯಲ್ಲಿರುವ ರಾಹುಲ್ ಗೆ ತವರಿನ ಅಂಗಣದಲ್ಲಿ ಮಿಂಚಲು ಒಂದು ಅವಕಾಶ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ