ಐಪಿಎಲ್ 2023: ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಹೈದರಾಬಾದ್ ಎದುರಾಳಿ

ಭಾನುವಾರ, 9 ಏಪ್ರಿಲ್ 2023 (08:40 IST)
ಹೈದರಾಬಾದ್: ಐಪಿಎಲ್ 2023 ರ ಇಂದಿನ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

 ಈ ಕೂಟದಲ್ಲಿ ಅತ್ಯಂತ ಬಲಿಷ್ಠ ತಂಡಗಳ ಪೈಕಿ ಪಂಜಾಬ್ ಕೂಡಾ ಒಂದಾಗಿದೆ. ಇದುವರೆಗೆ ಆಡಿದ ಎರಡು ಪಂದ್ಯಗಳ ಪೈಕಿ ಶಿಖರ್ ಧವನ್ ಪಡೆ ಎರಡನ್ನೂ ಗೆದ್ದುಕೊಂಡಿದೆ. ಸ್ವತಃ ಧವನ್ ನಾಯಕನ ಆಟವಾಡುತ್ತಿರುವುದು ವಿಶೇಷ.

ಅತ್ತ ಸನ್ ರೈಸರ್ಸ್ ಹೈದರಾಬಾದ್‍ ಗೆ ಆಡಿದ ಎರಡೂ ಪಂದ್ಯಗಳಿಂದ ಸೋಲಾಗಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾಗಿದೆ. ಸ್ಟಾರ್ ವೇಗಿಗಳು ಫಾರ್ಮ್ ನಲ್ಲಿಲ್ಲದೇ ಇರುವುದು ಚಿಂತೆಯ ವಿಷಯವಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ