ಐಪಿಎಲ್ 2024: ಹಾರ್ದಿಕ್ ಮುಂಬೈಗೆ ಬಂದಿದ್ದಕ್ಕೆ ಜಸ್ಪ್ರೀತ್ ಬುಮ್ರಾ ಮುನಿಸು

ಮಂಗಳವಾರ, 28 ನವೆಂಬರ್ 2023 (16:44 IST)
ಮುಂಬೈ: ಐಪಿಎಲ್ 2024 ಕ್ಕೆ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ಗೆ ಬಂದಿದ್ದು ಯಾಕೋ ವೇಗಿ ಜಸ್ಪ್ರೀತ್ ಬುಮ್ರಾಗೆ ಇಷ್ಟವಾದಂತಿಲ್ಲ.

ಇಷ್ಟು ದಿನ ರೋಹಿತ್ ಶರ್ಮಾ ಬಳಿಕ ತಾವೇ ಮುಂಬೈ ಇಂಡಿಯನ್ಸ್ ನಾಯಕ ಎಂಬ ನಂಬಿಕೆಯಲ್ಲಿದ್ದ ಬುಮ್ರಾಗೆ ಈಗ ಮುಂಬೈ ಮ್ಯಾನೇಜ್ ಮೆಂಟ್ ಹಾರ್ದಿಕ್ ರನ್ನು ಕರೆಸಿರುವುದು ಸಿಟ್ಟು ತರಿಸಿದೆ ಎನ್ನಲಾಗಿದೆ. ರೋಹಿತ್ ಬಳಿಕ ಹಾರ್ದಿಕ್ ಗೆ ಮುಂಬೈ ಮ್ಯಾನೇಜ್ ಮೆಂಟ್ ನಾಯಕನ ಪಟ್ಟ ಕಟ್ಟುವ ಸಾಧ‍್ಯತೆಯಿದೆ. ಹೀಗಾಗಿ ಬುಮ್ರಾಗೆ ಅಸಮಾಧಾನವಾಗಿದೆ.

ಇದೇ ಕಾರಣಕ್ಕೆ ಇಂದು ಸೋಷಿಯಲ್ ಮೀಡಿಯಾದಲ್ಲಿ ‘ಮೌನವೇ ಕೆಲವೊಮ್ಮೆ ಅತ್ಯುತ್ತಮ ಉತ್ತರ’ ಎಂದು ಬರೆದುಕೊಂಡು ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ತೋಡಿಕೊಂಡಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್ ಖಾತೆಯನ್ನು ಇನ್ ಸ್ಟಾಗ್ರಾಂ, ಟ್ವಿಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ.

ಹೀಗಾಗಿ ಬುಮ್ರಾ ಮುಂದಿನ ನಡೆಯೇನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಗುಜರಾತ್ ನಾಯಕರಾಗಿದ್ದ ಹಾರ್ದಿಕ್ ರನ್ನು ಇದ್ದಕ್ಕಿದ್ದಂತೆ ಮುಂಬೈಗೆ ಕರೆತಂದು ತನ್ನ ಸ್ಥಾನಕ್ಕೆ ಕುತ್ತು ತಂದರು ಎಂಬುದು ಬುಮ್ರಾಗೆ ನುಂಗಲಾರದ ತುತ್ತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ