ಐಪಿಎಲ್ 2024: ಹಾರ್ದಿಕ್ ಮರಳಿ ಮುಂಬೈಗೆ, ಗುಜರಾತ್ ಗೆ ಶುಬ್ಮನ್ ಗಿಲ್ ಕ್ಯಾಪ್ಟನ್
ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಿದ್ದ ಹಾರ್ದಿಕ್ ಕಳೆದ ಎರಡು ಸೀಸನ್ ಗಳಿಂದ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿ ಆ ತಂಡದ ಪಾಲಾಗಿದ್ದರು. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಒಮ್ಮೆ ಚಾಂಪಿಯನ್ ಆಗಿದ್ದರೆ ಇನ್ನೊಮ್ಮೆ ರನ್ನರ್ ಅಪ್ ಆಗಿತ್ತು.
ಆದರೆ ಇದೀಗ ಮತ್ತೆ ತಮ್ಮ ತವರು ಮುಂಬೈ ತಂಡವನ್ನು ಕೂಡಿಕೊಂಡಿದ್ದಾರೆ. ನಿನ್ನೆಯವರೆಗೂ ಹಾರ್ದಿಕ್ ಸೇರ್ಪಡೆ ಬಗ್ಗೆ ಗೊಂದಲವಿತ್ತು. ಆದರೆ ಇದೀಗ ಸ್ವತಃ ಮುಂಬೈ ಇಂಡಿಯನ್ಸ್ ಮತ್ತು ಹಾರ್ದಿಕ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಹಾರ್ದಿಕ್ ಮುಂಬೈ ಪಾಲಾಗಿರುವುದರಿಂದ ಗುಜರಾತ್ ಟೈಟನ್ಸ್ ತನ್ನ ತಂಡದ ನೂತನ ನಾಯಕನಾಗಿ ಆರಂಭಿಕ ಬ್ಯಾಟಿಗ ಶುಬ್ಮನ್ ಗಿಲ್ ರನ್ನು ಆಯ್ಕೆ ಮಾಡಿದೆ. ಇನ್ನು, ಮುಂಬೈ ಇಂಡಿಯನ್ಸ್ ನಲ್ಲಿದ್ದ ಕ್ಯಾಮರೂನ್ ಗ್ರೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಂದಿದ್ದಾರೆ.