ಐಪಿಎಲ್ 2024: ಕಷ್ಟದ ದಿನಗಳಲ್ಲಿ ನನ್ನ ಜೊತೆಗಿತ್ತು ಮುಂಬೈ ಇಂಡಿಯನ್ಸ್ ಎಂದ ಹಾರ್ದಿಕ್ ಪಾಂಡ್ಯ

ಮಂಗಳವಾರ, 28 ನವೆಂಬರ್ 2023 (11:40 IST)
ಮುಂಬೈ: ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡ ಬಿಟ್ಟು ಮತ್ತೆ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಮುಂಬೈ ಇಂಡಿಯನ್ಸ್ ಜೊತೆಗೆ ಹಾರ್ದಿಕ್ ಪಾಂಡ್ಯ ಐದು ಸೀಸನ್ ಕಳೆದಿದ್ದರು. ಬಳಿಕ ಗುಜರಾತ್ ಟೈಟನ್ಸ್ ತಂಡ ಹೊಸದಾಗಿ ರಚನೆಯಾದಾಗ ಆ ತಂಡಕ್ಕೆ ಬಿಕರಿಯಾದರು. ಆ ಮೂಲಕ ನಾಯಕನಾಗಿ ಯಶಸ್ಸನ್ನೂ ಕಂಡಿದ್ದಾರೆ.

ಈ ಹಿನ್ನಲೆಯಲ್ಲಿ ಈ ಬಾರಿ ಅವರು ಮುಂಬೈ ಇಂಡಿಯನ್ಸ್ ತಂಡ ಸೇರುತ್ತಾರೆ ಎಂದಾಗ ಯಾರೂ ಅಷ್ಟು ಸುಲಭವಾಗಿ ನಂಬಲಿಲ್ಲ. ಇದೀಗ ಕೊನೆಯ ಕ್ಷಣದಲ್ಲಿ ಟ್ರೇಡಿಂಗ್ ನಲ್ಲಿ ಹಾರ್ದಿಕ್ ಮುಂಬೈಗೆ ಮರಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ‘ಮುಂಬೈ ಇಂಡಿಯನ್ಸ್, ಆಕಾಶ್ ಅಂಬಾನಿ ನನ್ನ ಸುಖ-ದುಃಖಗಳಲ್ಲಿ ಜೊತೆಯಾಗಿದ್ದವರು. ಈ ತಂಡ ನನಗೆ ಯಾವತ್ತೂ ಸ್ಪೆಷಲ್. ಮತ್ತೆ ತವರಿಗೆ ಮರಳಿರುವ ಖುಷಿ ನನ್ನದಾಗಿದೆ. ರೋಹಿತ್, ಬುಮ್ರಾ, ಸೂರ್ಯ, ಕಿಶನ್ ಜೊತೆಗೆ ಮತ್ತೆ ಆಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ