ಐಪಿಎಲ್ 2024: ಮುಂಬೈ ಇಂಡಿಯನ್ಸ್ ಈಗ ಅಧಿಕೃತವಾಗಿ ಪ್ಲೇ ಆಫ್ ನಿಂದ ಔಟ್

Krishnaveni K

ಗುರುವಾರ, 9 ಮೇ 2024 (12:11 IST)
ಮುಂಬೈ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ನಿನ್ನೆಯ ಪಂದ್ಯವನ್ನು 10 ವಿಕೆಟ್ ಗಳಿಂದ ಗೆಲ್ಲುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿದೆ.

ನಿನ್ನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಹೈದರಾಬಾದ್ ಒಟ್ಟು 12 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಸೋತ ಲಕ್ನೋ ಆರನೇ ಸ್ಥಾನಕ್ಕೆ ಜಾರಿದೆ. ಆದರೆ ಈ ಎರಡೂ ತಂಡಗಳ ಫಲಿತಾಂಶ ಪರಿಣಾಮ ಬೀರಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ.

12 ಪಂದ್ಯಗಳಿಂದ 4 ಗೆಲುವು ಸಂಪಾದಿಸಿರುವ ಮುಂಬೈ ಇಂಡಿಯನ್ಸ್ ಈಗ ಅಧಿಕೃತವಾಗಿ ಐಪಿಎಲ್ ನಿಂದ ಹೊರಬಿದ್ದಂತಾಗಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲ ಬಾರಿ ಮತ್ತು ಒಟ್ಟಾರೆಯಾಗಿ ಮುಂಬೈ ಇದು ಎರಡನೇ ಬಾರಿ ಪ್ಲೇ ಆಫ್ ಗೂ ಏರದೇ ಐಪಿಎಲ್ ನಿಂದ ಹೊರಬಿದ್ದಿದೆ.

ಈ ಸೀಸನ್ ನಲ್ಲಿ ಮುಂಬೈ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಮಾಡಿತ್ತು. ಆದರೆ ಮುಂಬೈ ತಂಡದ ಈ ಪ್ರಯೋಗಕ್ಕೆ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ತಕ್ಕಂತೆ ಮುಂಬೈ ಪ್ರದರ್ಶನವೂ ತೀರಾ ನಿರಾಶಾದಾಯಕವಾಗಿತ್ತು. ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಒಂದೊಂದು ಶತಕ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗ್ ಪ್ರದರ್ಶನ ಬಿಟ್ಟರೆ ಮುಂಬೈ ತಂಡದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿರಲಿಲ್ಲ. ಇದೀಗ ಅದಕ್ಕೆ ತಕ್ಕ ಬೆಲೆ ತೆತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ