ಐಪಿಎಲ್ 2024: ರಾಜಸ್ಥಾನ್ ರಾಯಲ್ಸ್ ಸತತ ಎರಡನೇ ಗೆಲುವು, ಡೆಲ್ಲಿಗೆ ಎರಡನೇ ಸೋಲು

Krishnaveni K

ಶುಕ್ರವಾರ, 29 ಮಾರ್ಚ್ 2024 (08:54 IST)
ಜೈಪುರ: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಸತತ ಎರಡನೇ ಗೆಲುವು ದಾಖಲಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಸೋಲು ಕಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ 12 ರನ್ ಗಳ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ರಾಜಸ್ಥಾನ್ ಪರ ಮಿಂಚಿದ ರಿಯಾನ್ ಪರಾಗ್ 45 ಎಸೆತಗಳಿಂದ 6 ಸಿಕ್ಸರ್ ಸಹಿತ 84 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಲಷ್ಟೇ ಶಕ್ತವಾಯಿತು. ಡೇವಿಡ್ ವಾರ್ನರ್ 49, ರಿಷಬ್ ಪಂತ್ 28 ರನ್ ಗಳಿಸಿದರು. ಡೆಲ್ಲಿ ಪರ ಟ್ರಿಸ್ತಾನ್ ಸ್ಟಬ್ಸ್  ಅಜೇಯ 43 ರನ್ ಗಳಿಸಿ ಗೆಲುವಿನ ಪ್ರಯತ್ನ ನಡೆಸಿದರು.

ಆದರೆ ರಾಜಸ್ಥಾನ್ ಪರ ಮತ್ತೊಮ್ಮೆ ಸಂದೀಪ್ ಶರ್ಮಾ, ಆವೇಶ್ ಖಾನ್ ಕೊನೆಯ ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ನಡೆಸಿದರು. ಕಳೆದ ಪಂದ್ಯವನ್ನೂ ರಾಜಸ್ಥಾನ್ ಸಂದೀಪ್ ಶರ್ಮಾ ಬೌಲಿಂಗ್ ನಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲೂ ಮತ್ತೊಮ್ಮೆ ಅದೇ ಮ್ಯಾಜಿಕ್ ಮಾಡಿದರು. ಇದರೊಂದಿಗೆ ರಾಜಸ್ಥಾನ್ ಸತತ ಎರಡನೇ ಗೆಲುವು ಕಂಡರೆ ಡೆಲ್ಲಿ ಮತ್ತೊಮ್ಮೆ ಗೆಲುವಿನ ಖಾತೆ ತೆರೆಯಲು ವಿಫಲರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ