ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್ ಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಹತ್ವದ ಪಂದ್ಯ

Krishnaveni K

ಶನಿವಾರ, 27 ಏಪ್ರಿಲ್ 2024 (11:27 IST)
ಲಕ್ನೋ: ಐಪಿಎಲ್ 2024 ರಲ್ಲಿ ಇಂದು ಎರಡನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅಗ್ರಕ್ರಮಾಂಕದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ 8 ಪಂದ್ಯಗಳಿಂದ 5 ಗೆಲುವು ಪಡೆದುಕೊಂಡಿದ್ದು, ಅಂಕಪಟ್ಟಿಯಲ್ಲಿ ಟಾಪ್ 5 ರೊಳಗೆ ಉಳಿದುಕೊಳ್ಳಲು ಪೈಪೋಟಿ ನಡೆಸುತ್ತಿದೆ. ಪ್ಲೇ ಆಫ್ ಹಂತಕ್ಕೇರುವ ಅವಕಾಶ ಉಳಿಸಿಕೊಳ್ಳಲು ಲಕ್ನೋಗೆ ಇಂದು ಗೆಲುವು ಅನಿವಾರ್ಯ.

ಲಕ್ನೋಗೆ ಕಳೆದ ಎರಡು ಪಂದ್ಯಗಳಲ್ಲಿ ಸತತ ಗೆಲುವು ಸಿಕ್ಕಿತ್ತು. ಅದೂ ದೊಡ್ಡ ತಂಡದ ವಿರುದ್ಧ ದೊಡ್ಡ ಅಂತರದ ಗೆಲುವು. ಇದು ಖಂಡಿತವಾಗಿಯೂ ರಾಹುಲ್ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ. ಕೆಎಲ್ ರಾಹುಲ್ ಜೊತೆಗೆ ಕಳೆದ ಪಂದ್ಯದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಆಡಿದ ಇನಿಂಗ್ಸ್ ಅವರ ಸಾಮರ್ಥ್ಯವೇನೆಂದು ತೋರಿಸಿಕೊಟ್ಟಿತ್ತು.

ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿ ಮೊದಲಿನಿಂದಲೂ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದೆ. ಒಟ್ಟು 8 ಪಂದ್ಯಗಳನ್ನಾಡಿರುವ ರಾಜಸ್ಥಾನ್ 7 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ರಾಜಸ್ಥಾನ್ ತಂಡದಂತೆ ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಮತ್ತೊಂದು ತಂಡವಿಲ್ಲ. ಇದಕ್ಕೆ ಸಂಜು ಸ್ಯಾಮ್ಸನ್ ನಾಯಕತ್ವ, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ರಂತಹ ಪ್ರಮುಖ ಬ್ಯಾಟಿಗರ ಅದ್ಭುತ ಬ್ಯಾಟಿಂಗ್ ಮತ್ತು ಸಂದೀಪ್ ಶರ್ಮ, ಯಜುವೇಂದ್ರ ಚಾಹಲ್ ರಂತಹ ಅದ್ಭುತ ಬೌಲಿಂಗ್ ಪಡೆಯೂ ಕಾರಣ. ಇಂದಿನ ಈ ಪಂದ್ಯದಲ್ಲಿ ಫಾರ್ಮ್ ನಲ್ಲಿರುವ ಎರಡೂ ತಂಡಗಳು ಸೆಣಸಾಡುತ್ತಿದ್ದು, ಉತ್ತಮ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ