ಟೀಂ ಇಂಡಿಯಾ ಬಳಿಕ ಆರ್ ಸಿಬಿಯಲ್ಲೂ ತೀವ್ರ ಟ್ರೋಲ್ ಆದ ರಜತ್ ಪಾಟಿದಾರ್

Krishnaveni K

ಶನಿವಾರ, 30 ಮಾರ್ಚ್ 2024 (12:00 IST)
Photo Courtesy: Twitter
ಬೆಂಗಳೂರು: ಟೀಂ ಇಂಡಿಯಾ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಯೂ ಬಳಸಿಕೊಳ್ಳದೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಜತ್ ಪಾಟಿದಾರ್ ಈಗ ಆರ್ ಸಿಬಿಯಲ್ಲೂ ಅದೇ ರೀತಿ ಟ್ರೋಲ್ ಆಗುತ್ತಿದ್ದಾರೆ.

ರಜತ್ ಪಟಿದಾರ್ ಎಂಬಾತನನ್ನು ಆರ್ ಸಿಬಿ ಅದ್ಯಾಕೆ ತಂಡದಲ್ಲಿ ಇಟ್ಟುಕೊಂಡಿದೆಯೋ ಎಂದು ಅಭಿಮಾನಿಗಳು ಇನ್ನಿಲ್ಲದಂತೆ ಆಕ್ರೋಶ ಹೊರಹಾಕುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ ಸಿಬಿ 7 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತ್ತು. ಆರ್ ಸಿಬಿ ಪರ ಕೊಹ್ಲಿ ಏಕಾಂಗಿಯಾಗಿ 83 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು.

ಆದರೆ ಈ ಪಂದ್ಯದಲ್ಲೂ ರಜತ್ ಪಾಟಿದಾರ್ 4 ಎಸೆತ ಎದುರಿಸಿ ಕೇವಲ 3 ರನ್ ಗೆ ವಿಕೆಟ್ ಒಪ್ಪಿಸಿದ್ದರು. ಇದಕ್ಕೆ ಮೊದಲು ನಡೆದ ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಶೂನ್ಯ ಎರಡನೇ ಪಂದ್ಯದಲ್ಲಿ ರಜತ್ ಗಳಿಸಿದ್ದು ಕೇವಲ 18 ರನ್. ಮಧ‍್ಯಮ ಕ್ರಮಾಂಕದಲ್ಲಿ ರಜತ್ ಬೇಗನೇ ಔಟಾಗುವುದರಿಂದ ಆರ್ ಸಿಬಿ ಕುಸಿತಕ್ಕೊಳಗಾಗುತ್ತಿದೆ.

ಹೀಗಾಗಿ ಅಭಿಮಾನಿಗಳು ರಜತ್ ರನ್ನು ತಂಡದಲ್ಲಿ ಉಳಿಸಿಕೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರೊಬ್ಬ ವೇಸ್ಟ್ ಆಟಗಾರ ಎನ್ನುತ್ತಿದ್ದಾರೆ. ಆರ್ ಸಿಬಿ ಬ್ಯಾಟಿಂಗ್ ಸುಧಾರಿಸಬೇಕಾದರೆ ಮೊದಲು ಪಾಟೀದಾರ್ ಗೆ ಕೊಕ್ ಕೊಡಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ