ಐಪಿಎಲ್ 2024: ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಆರ್ ಸಿಬಿ ಹೀಗೆ ಮಾಡಬೇಕು

Krishnaveni K

ಶನಿವಾರ, 13 ಏಪ್ರಿಲ್ 2024 (09:30 IST)
ಬೆಂಗಳೂರು: ಐಪಿಎಲ್ 2024 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲುಗಳಿಂದ ಹೀನಾಯ ಪರಿಸ್ಥಿತಿಯಲ್ಲಿದೆ. ಇದೀಗ ಪ್ಲೇ ಆಫ್ ಗೇರಲು ತಂಡ ಕಠಿಣ ಹಾದಿ ಕ್ರಮಿಸಬೇಕಿದೆ.

ಇದುವರೆಗೆ ಆರ್ ಸಿಬಿಗೆ ಫೈನಲ್ ಗೆಲ್ಲಲು ಸಾಧ‍್ಯವಾಗಿಲ್ಲ. ಈ ಬಾರಿ ಮಹಿಳೆಯರು ಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದರು. ಹೀಗಾಗಿ ಪುರುಷರೂ ಈ ಬಾರಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಕೊಹ್ಲಿ ಇದು ಆರ್ ಸಿಬಿಯ ಹೊಸ ಅಧ್ಯಾಯ ಎಂದು ಹೇಳಿದ್ದಷ್ಟೇ ಬಂತು.

ಈ ಬಾರಿಯೂ ಆರ್ ಸಿಬಿಯದ್ದೂ ಮತ್ತದೇ ಹಳೇ ಕತೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಆರ್ ಸಿಬಿಗೆ ಈಗ ಪ್ಲೇ ಆಫ್ ಹಾದಿ ಕಷ್ಟವಾಗಿದೆ. ಹಾಗಂತ ಪ್ಲೇ ಆಫ್ ಕನಸು ಸಂಪೂರ್ಣ ಭಗ್ನವಾಗಿದೆ ಎಂದರ್ಥವಲ್ಲ. ಇನ್ನೂ ಆರ್ ಸಿಬಿ ಪ್ಲೇ ಆಫ್ ಹಂತಂಕ್ಕೇರಲು ಸಾಧ‍್ಯವಿದೆ.

ಅದಕ್ಕಾಗಿ ತಂಡ ಇನ್ನು ಉಳಿದ 8 ಪಂದ್ಯಗಳ ಪೈಕಿ 7 ರಲ್ಲಿ ಗೆಲುವು ಕಾಣಬೇಕು. ಹೀಗಾದಲ್ಲಿ ಒಟ್ಟು 16 ಅಂಕಗಳೊಂದಿಗೆ ಪ್ಲೇ ಆಫ್ ಗೇರಬಹುದಾಗಿದೆ. ಆದರೆ ಇಷ್ಟರವರೆಗೆ ಗೆಲ್ಲಲು ಪರದಾಡಿದ್ದ ಆರ್ ಸಿಬಿಗೆ ಇನ್ನು 8 ರ ಪೈಕಿ 7 ರಲ್ಲಿ ಗೆಲುವು ಅಷ್ಟು ಸುಲಭವಲ್ಲ. ಹೀಗಾಗಿ ಮುಂದಿನ ಒಂದೆರಡು ಪಂದ್ಯಗಳಲ್ಲೇ ಆರ್ ಸಿಬಿ ಹಣೆಬರಹ ಬಹಿರಂಗವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ