ಐಪಿಎಲ್ 2024: ಅಬ್ಬಬ್ಬಾ…! ಎಂಥಾ ಸಿಕ್ಸರ್ ಹೊಡೀತಾನಿವ ಎಂದು ದಂಗಾದ ವಿರಾಟ್ ಕೊಹ್ಲಿ

Krishnaveni K

ಶುಕ್ರವಾರ, 12 ಏಪ್ರಿಲ್ 2024 (08:22 IST)
Photo Courtesy: Twitter
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ 2024 ರ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಗ ರಜತ್ ಪಾಟೀದಾರ್ ಭರ್ಜರಿ ಅರ್ಧಶತಕ ಸಿಡಿಸಿದರು.

ತಂಡ 23 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್ ಗೆ ಬಂದ ರಜತ್ ಪಾಟೀದಾರ್ ಕೇವಲ 26 ಎಸೆತ ಎದುರಿಸಿ 50 ರನ್ ಚಚ್ಚಿದರು. ಇದರಲ್ಲಿ 4 ಭರ್ಜರಿ ಸಿಕ್ಸರ್ ಕೂಡಾ ಇತ್ತು. ರಜತ್ ಬಿಗ್ ಹಿಟ್ಟರ್ ಎಂದೇ ಖ್ಯಾತಿ ಪಡೆದವರು. ಆದರೆ ಇಷ್ಟು ದಿನ ಕಳಪೆ ಫಾರ್ಮ್ ನಲ್ಲಿದ್ದ ಅವರಿಂದ ದೊಡ್ಡ ಇನಿಂಗ್ಸ್ ಬಂದೇ ಇರಲಿಲ್ಲ.

ಆದರೆ ನಿನ್ನೆಯ ಪಂದ್ಯದಲ್ಲಿ ಇಷ್ಟು ದಿನದ ಅಪವಾದವನ್ನೆಲ್ಲಾ ತೊಡೆದು ಹಾಕುವಂತಹ ಇನಿಂಗ್ಸ್ ಆಡಿದರು. ಈ ವೇಳೆ ಅವರು ಸಿಡಿಸಿದ ಬಿಗ್ ಸಿಕ್ಸರ್ ಗಳು ಮನಮೋಹಕವಾಗಿತ್ತು. ರಜತ್ ಸಿಕ್ಸರ್ ಗಳನ್ನು ನೋಡಿ ಸ್ವತಃ ಕಿಂಗ್ ಕೊಹ್ಲಿಯೇ ದಂಗಾಗಿ ಹೋದರು.

ಗ್ಯಾಲರಿಯಲ್ಲಿ ಕೂತು ರಜತ್ ಬ್ಯಾಟಿಂಗ್ ಎಂಜಾಯ್ ಮಾಡುತ್ತಿದ್ದ ಕೊಹ್ಲಿ ದೊಡ್ಡ ಹೊಡೆತ ನೋಡಿ ದಂಗಾಗಿ ಜೋರಾಗಿ ಚಿಯರ್ ಅಪ್ ಮಾಡುತ್ತಿದ್ದುದು ಕಂಡು ಬಂತು. ಈ ಪಂದ್ಯದಲ್ಲಿ ಕೊಹ್ಲಿ ಮಾತ್ರ 9 ಎಸೆತ ಎದುರಿಸಿ ಕೇವಲ 3 ರನ್ ಗೆ ವಿಕೆಟ್ ಒಪ್ಪಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ