ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯುತ್ತಿದ್ದು ಇತ್ತೀಚೆಗಿನ ವರದಿ ಬಂದಾಗ ಡೆಲ್ಲಿ 9 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ. ಈ ಪಂದ್ಯ ಆರ್ ಸಿಬಿ ಪಾಲಿಗೆ ಮಹತ್ವದ್ದಾಗಿದೆ.
11 ಪಂದ್ಯಗಳಿಂದ 4 ಗೆಲುವುಗಳೊಂದಿಗೆ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿರುವ ಆರ್ ಸಿಬಿಗೆ ಪ್ಲೇ ಆಫ್ ಹಾದಿಗೇರಲು ಇತರೆ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರ ಮುಖ್ಯವಾಗಲಿದೆ. ಸದ್ಯಕ್ಕೆ ಆರ್ ಸಿಬಿ ಪ್ಲೇ ಆಫ್ ಗೇರಲು ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಎನ್ನುವುದು ಮುಖ್ಯವಾಗಿದೆ.
ಆರ್ ಸಿಬಿ ಪ್ಲೇ ಆಫ್ ಹಾದಿಗೇರಬೇಕಾದರೆ ಈಗ ನಾಲ್ಕನೇ ಸ್ಥಾನದಲ್ಲಿರುವ ತಂಡ 14 ಅಂಕಗಳನ್ನು ಮಾತ್ರ ಹೊಂದಿರಬೇಕು. ಜೊತೆಗೆ ಆರ್ ಸಿಬಿ ಮುಂದಿನ ಮೂರು ಲೀಗ್ ಪಂದ್ಯಗಳಲ್ಲಿ ಉತ್ತಮ ನೆಟ್ ರನ್ ರೇಟ್ ನೊಂದಿಗೆ ಜಯ ಗಳಿಸಬೇಕು.
ಅಲ್ಲದೆ ಇಂದು ನಡೆಯುತ್ತಿರುವ ರಾಜಸ್ಥಾನ್ ಮತ್ತು ಡೆಲ್ಲಿ ಪಂದ್ಯದಲ್ಲಿ ರಾಜಸ್ಥಾನ್ ತಂಡ ಗೆಲ್ಲಬೇಕು. ಆಗ ಡೆಲ್ಲಿ ಸೋತು 6 ನೇ ಸ್ಥಾನದಲ್ಲೇ ಉಳಿಯಲಿದೆ. ಆಗ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಹಂತಕ್ಕೇರುವ ಅವಕಾಶ ಸಿಗಲಿದೆ.