ಐಪಿಎಲ್ 2024: ರಚಿನ್ ರವೀಂದ್ರಗೆ ಮಧ್ಯಗಬೆರಳು ತೋರಿಸಿ ವಿರಾಟ್ ಕೊಹ್ಲಿ ಅಸಭ್ಯ ವರ್ತನೆ

Krishnaveni K

ಶನಿವಾರ, 23 ಮಾರ್ಚ್ 2024 (10:00 IST)
Photo Courtesy: Twitter
ಚೆನ್ನೈ: ಐಪಿಎಲ್ 2024 ರ ಆರಂಭಿಕ ಪಂದ್ಯದಲ್ಲಿ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೊಳಗಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಸಭ್ಯ ವರ್ತನೆ ಎಲ್ಲರ ಟೀಕೆಗೊಳಗಾಗಿದೆ. ಸಿಎಸ್ ಕೆ ಆಟಗಾರ ರಚಿನ್ ರವೀಂದ್ರ ಔಟಾದ ಬಳಿಕ ಕೊಹ್ಲಿ ಮಧ್ಯ ಬೆರಳು ತೋರಿಸಿರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಅವರ ಈ ವರ್ತನೆಗೆ ಟೀಕೆ ವ್ಯಕ್ತವಾಗಿದೆ.

ಒಬ್ಬ ಹಿರಿಯ ಆಟಗಾರನಾಗಿ, ಖ್ಯಾತಿ ಪಡೆದ ಆಟಗಾರನಾಗಿ ಮೈದಾನದಲ್ಲಿ ಇಂತಹ ವರ್ತನೆ ಸರಿಯಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರ ಟೀಕಿಸಿದ್ದಾರೆ. ಕೊಹ್ಲಿಯನ್ನು ಎಷ್ಟೋ ಜನ ರೋಲ್ ಮಾಡೆಲ್ ಆಗಿ ನೋಡುತ್ತಾರೆ. ಆದರೆ ಮೈದಾನದಲ್ಲಿ ಅವರ  ಈ ಅತಿರೇಕದ ವರ್ತನೆ ತಪ್ಪು ಸಂದೇಶ ನೀಡಿದಂತಾಗುತ್ತದೆ.

ಈ ಮೊದಲು ಆಸ್ಟ್ರೇಲಿಯಾದಲ್ಲಿ ಇದೇ ರೀತಿ ಟೆಸ್ಟ್ ಸರಣಿ ವೇಳೆ ಪ್ರೇಕ್ಷಕರತ್ತ ಮಧ್ಯಬೆರಳು ತೋರಿ ಅಸಭ್ಯ ವರ್ತನೆ ತೋರಿದ್ದರು. ಈ ವೇಳೆ ಮ್ಯಾಚ್ ರೆಫರಿ ಅವರನ್ನು ವಿಚಾರಣೆ ನಡೆಸಿ ದಂಡ ವಿಧಿಸಿದ್ದರು. ಆ ಬಳಿಕ ಸಂದರ್ಶನವೊಂದರಲ್ಲಿ ತಮ್ಮ ಅಂದಿನ ವರ್ತನೆ ತನಗೇ ನಾಚಿಕೆಯಾಗಿತ್ತು ಎಂದಿದ್ದರು. ಆದರೆ ಈಗ ಅದನ್ನೇ ಪುನರಾವರ್ತನೆ ಮಾಡಿರುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ