ಚೆನ್ನೈ: MA ಚಿದಂಬರಂ ಕ್ರೀಡಾಂಗಣದಲ್ಲಿ RCB ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ CSK ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.
ಐಪಿಎಲ್ ಆವೃತ್ತಿಯ ಹೈವೋಲ್ಟೇಜ್ ಪಂದ್ಯಾಟವಾದ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಇದೀಗ ಆರಂಭಗೊಂಡಿದೆ.
ಕಳೆದ ವರ್ಷ CSK ಅನ್ನು RCB ಸೋಲಿಸುವ ಮೂಲಕ ಪ್ಲೇ ಆಫ್‌ನಿಂದ ಚೆನ್ನೈ ಹೊರಬಿದ್ದಿತ್ತು. ಇದೀಗ ಇಂದು ನಡೆಯುವ ಪಂದ್ಯಾಟದ ಮೂಲಕ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಚೆನ್ನೈ ಭಾರೀ ಪ್ಲ್ಯಾನ್‌ನೊಂದಿಗೆ ಸಜ್ಜಾಗಿದೆ.
2008 ರಿಂದ ಚೆನ್ನೈ ಚೆಪಾಕ್‌ನಲ್ಲಿ RCB ವಿರುದ್ಧ CSK ಸೋಲನ್ನು ಒಪ್ಪಿಕೊಂಡಿಲ್ಲ ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಏನು ಬೇಕಾದರೂ ಆಗಬಹುದು.
ಬೆಂಗಳೂರು ನಾಯಕ ರಜತ್ ಪಾಟಿದಾರ್, ವಿರಾಟ್ ಕೊಹ್ಲಿ ಮತ್ತು ಇನ್ನೂ ಹೆಚ್ಚಿನವರ ಮೇಲೆ ಒತ್ತಡ ಇರುತ್ತದೆ ಆದರೆ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ತಮ್ಮ ಆಟಗಾರರು CSK ಯ ಪ್ರಬಲ ಸ್ಪಿನ್ ದಾಳಿಯ ವಿರುದ್ಧ ಪರಿಸ್ಥಿತಿಯನ್ನು ಬದಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಪಂದ್ಯದಲ್ಲಿ, ನೂರ್ ಅಹ್ಮದ್, ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಚೆನ್ನೈನಲ್ಲಿ ಸ್ಪಿನ್ ಸ್ನೇಹಿ ಟ್ರ್ಯಾಕ್‌ಗೆ ಆಯ್ಕೆ ಮಾಡಲಾಗಿದೆ ಮತ್ತು ಇದು RCB ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಪರೀಕ್ಷೆಯಾಗಲಿದೆ.