IPL 2025: ಎಲ್ಎಸ್ ಜಿ ನಾಯಕ ರಿಷಭ್ ಪಂತ್ ಗೆ ಸಂಜೀವ್ ಗೊಯೆಂಕಾ ಕ್ಲಾಸ್: 27 ಕೋಟಿ ವೇಸ್ಟ್

Krishnaveni K

ಬುಧವಾರ, 2 ಏಪ್ರಿಲ್ 2025 (10:07 IST)
Photo Credit: X
ಲಕ್ನೋ: ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯವನ್ನು ಸೋತ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಗೆ ಮಾಲಿಕ ಸಂಜೀವ್ ಗೊಯೆಂಕಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಫ್ಯಾನ್ಸ್ ಕೂಡಾ 27 ಕೋಟಿ ವೇಸ್ಟ್ ಎಂದು ಕಾಲೆಳೆದಿದ್ದಾರೆ.

ಕಳೆದ ಸೀಸನ್ ನಲ್ಲಿ ಲಕ್ನೋ ಸೋಲಿಗೆ ಕೆಎಲ್ ರಾಹುಲ್ ಕಾರಣ ಎಂಬಂತೆ ಸಂಜೀವ್ ಗೊಯೆಂಕಾ ವರ್ತಿಸಿದ್ದರು. ಮೈದಾನದಲ್ಲೇ ಬೈದು ಅವಮಾನ ಮಾಡಿದ್ದರು. ಬಳಿಕ ರಾಹುಲ್ ರನ್ನು ತಂಡದಿಂದ ಕೈ ಬಿಟ್ಟಿದ್ದರು. ಇದೀಗ ರಾಹುಲ್ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ.

ರಾಹುಲ್ ಸ್ಥಾನಕ್ಕೆ ಸಂಜೀವ್ 27 ಕೋಟಿ ರೂ. ಬೆಲೆ ತೆತ್ತು ರಿಷಭ್ ಪಂತ್ ರನ್ನು ಖರೀದಿ ಮಾಡಿದ್ದರು. ಈಗ ರಿಷಭ್ ನಾಯಕತ್ವದಲ್ಲೂ ಲಕ್ನೋ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಹೀಗಾಗಿ ಮಾಲಿಕ ಸಂಜೀವ್ ಗೊಯೆಂಕಾ ಅಸಮಾಧಾನಗೊಂಡಿದ್ದಾರೆ. ನಿನ್ನೆಯ ಪಂದ್ಯದ ಬಳಿಕ ಮೈದಾನಕ್ಕೆ ಬಂದ ಸಂಜೀವ್ ಗೊಯೆಂಕಾ, ರಾಹುಲ್ ಗೆ ಮಾಡಿದಂತೆ ರಿಷಭ್ ಗೂ ಎಲ್ಲರೆದುರೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. 27 ಕೋಟಿ ಕೊಟ್ಟಿದ್ದು ವೇಸ್ಟ್ ಆಯ್ತು. ರಾಹುಲ್ ರಂತಹ ಡೆಡಿಕೇಷನ್ ಇರುವ ಆಟಗಾರನನ್ನು ಕಿತ್ತು ಹಾಕಿ ರಿಷಭ್ ರನ್ನು ಕರೆತಂದು ಸಂಜೀವ್ ಗೊಯೆಂಕಾ ಅದೇನು ಸಾಧನೆ ಮಾಡಿದರೋ ಎಂದು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ