ಮುಂಬೈ: ಐಪಿಎಲ್ 2025 ನಿರ್ಣಾಯಕ ಘಟ್ಟಕ್ಕೆ ಬಂದಿದ್ದು ಇದೀಗ ಪ್ಲೇ ಆಫ್ ಪಂದ್ಯಗಳು ಮಾತ್ರವೇ ಬಾಕಿಯಿದೆ. ಪ್ಲೇ ಆಫ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.
ಈ ಬಾರಿ ಐಪಿಎಲ್ ಪ್ಲೇ ಆಫ್ ಹಂತಕ್ಕೇರಿದ ತಂಡಗಳೆಂದರೆ ಪಂಜಾಬ್ ಕಿಂಗ್ಸ್, ಆರ್ ಸಿಬಿ, ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್. ಈ ಪೈಕಿ ಅಗ್ರ ಎರಡು ಸ್ಥಾನದಲ್ಲಿರುವ ಆರ್ ಸಿಬಿ ಮತ್ತು ಪಂಜಾಬ್ ಕ್ವಾಲಿಫೈಯರ್ ಪಂದ್ಯವಾಡಲಿದೆ. ಕೊನೆಯ ಎರಡು ಸ್ಥಾನದಲ್ಲಿರುವ ಮುಂಬೈ ಮತ್ತು ಗುಜರಾತ್ ಎಲಿಮಿನೇಟರ್ ಪಂದ್ಯವಾಡಲಿದೆ.
ಕ್ವಾಲಿಫೈಯರ್ ಪಂದ್ಯವಾಡಲಿರುವ ತಂಡ ಸೋತರೂ ಫೈನಲ್ ಗೇರುವ ಅವಕಾಶ ಮತ್ತೊಮ್ಮೆ ಸಿಗಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವ ತಂಡದೊಂದಿಗೆ ಮತ್ತೊಂದು ಪಂದ್ಯವಾಡಬೇಕಾಗುತ್ತದೆ. ಇದನ್ನು ಗೆದ್ದರೆ ಸಾಕು. ಇನ್ನು ಎಲಿಮಿನೇಟರ್ ನಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಮೊದಲು ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದು ನಾಳೆ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಚಂಢೀಘಡದಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಮೇ 30 ರಂದು ಚಂಢೀಘಡದಲ್ಲಿ ನಡೆಯಲಿದೆ.
ಪ್ಲೇ ಆಫ್ ವೇಳಾಪಟ್ಟಿ
ಮೇ 29: ಕ್ವಾಲಿಫೈಯರ್ 1: ಆರ್ ಸಿಬಿ ವರ್ಸಸ್ ಪಂಜಾಬ್ ಕಿಂಗ್ಸ್: ರಾತ್ರಿ 7.30 ಕ್ಕೆ
ಮೇ 30: ಎಲಿಮಿನೇಟರ್: ಗುಜರಾತ್ ಟೈಟನ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ರಾತ್ರಿ 7.30 ಕ್ಕೆ
ಜೂನ್ 1: ಪ್ಲೇ ಆಫ್ 2: ಎಲಿಮಿನೇಟರ್ ವಿನ್ನರ್ ವರ್ಸಸ್ ಕ್ವಾಲಿಫೈಯರ್ ಸೋತವರು: ರಾತ್ರಿ 7.30. ಕ್ಕೆ
ಜೂನ್ 3: ಫೈನಲ್: ಅಹಮ್ಮದಾಬಾದ್ ನಲ್ಲಿ ರಾತ್ರಿ 7.30 ಕ್ಕೆ