IPL 2025: ಗೆಲ್ಲುವ ಅವಕಾಶವಿದ್ದರೂ ಸೋತ ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ ಗೆ ಕಾದಿದೆ ತಕ್ಕ ಶಾಸ್ತಿ
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ರಿಷಭ್ ಪಂತ್ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಗುರಿಯನ್ನೇ ನೀಡಿತು.
ಲಕ್ನೋ ಆರಂಭಿಕ ಬೌಲಿಂಗ್ ಕೂಡಾ ಚೆನ್ನಾಗಿಯೇ ಇತ್ತು. 15 ಓವರ್ ವರೆಗೂ ಪಂದ್ಯ ಲಕ್ನೋ ಹಿಡಿತದಲ್ಲೇ ಇತ್ತು. 15 ಓವರ್ ಗಳಲ್ಲಿ ಸಿಎಸ್ ಕೆ ಕೇವಲ 111 ರನ್ ಕಲೆ ಹಾಕಿತ್ತು. ಹೀಗಾಗಿ ಅಂತಿಮ 5 ಓವರ್ ಗಳಲ್ಲಿ 55 ರನ್ ಗಳಿಸುವ ಒತ್ತಡಕ್ಕೆ ಸಿಲುಕಿತು.
ಆದರೆ ನಿರ್ಣಾಯಕ ಹಂತದಲ್ಲಿ ರಿಷಭ್ ಬೌಲಿಂಗ್ ನಿಯೋಜನೆ ಎಲ್ಲರನ್ನೂ ಅಚ್ಚರಿಗೆ ದೂಡಿತು. ಸ್ಪಿನ್ ಪಿಚ್ ಆಗಿದ್ದರೂ ಪ್ರಮುಖ ಸ್ಪಿನ್ನರ್ ಗೆ ಬೌಲಿಂಗ್ ನೀಡದೇ ತಾವಾಗಿಯೇ ಸಿಎಸ್ ಕೆ ರಿಷಭ್ ಪಂತ್ ಪಂದ್ಯ ಬಿಟ್ಟುಕೊಟ್ಟರು. ಇನ್ನೊಂದೆಡೆ ಧೋನಿ 11 ಎಸೆತಗಳಿಂದ 26 ರನ್ ಸಿಡಿಸಿ ತಂಡಕ್ಕೆ ಗೆಲುವು ಕೊಡಿಸಿಯೇ ಬಿಟ್ಟರು. ರಿಷಭ್ ನಿರ್ಧಾರಗಳ ಬಗ್ಗೆ ಕಾಮೆಂಟೇಟರ್ ಗಳೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಭಿಮಾನಿಗಳೂ ಕಾಮೆಂಟ್ ಮಾಡಿದ್ದು ಸಂಜೀವ್ ಗೊಯೆಂಕಾ ಇನ್ನು ರಿಷಭ್ ಗೆ ತಕ್ಕ ಶಾಸ್ತಿ ಮಾಡ್ತಾರೆ ನೋಡ್ತಿರಿ ಎಂದು ಕಾಲೆಳೆದಿದ್ದಾರೆ.